ನ್ಯೂಸ್

Bigg Boss: ಬಿಗ್​ ಬಾಸ್​ ಕನ್ನಡ ಶೋ ಗೆ ಮತ್ತೆ ಅನುಮತಿ; ಸ್ಟುಡಿಯೋ ಓಪನ್ ಸಾಧ್ಯತೆ

ನಿರುಪಾದಿ ಬ್ಯಾಡಗಿ

Bigg Boss: ಮಂಗಳವಾರ (ಅ. 07) ಬಂದ್ ಮಾಡಿದ್ದ ಕನ್ನಡದ ರಿಯಾಲಿಟಿ ಶೋ ಬಿಗ್​ ಬಾಸ್​ ಕನ್ನಡಗೆ ಮತ್ತೆ ಅನುಮತಿ ನೀಡಲಾಗಿದೆ.  ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಜಾಲಿವುಡ್ ಸ್ಟುಡಿಯೋ ಅನ್ನು ಸೀಜ್ ಮಾಡಲಾಗಿತ್ತು. ಆದರೆ ಇಂದು ಡಿಸಿಎಂ ಡಿಕೆಶಿ ಸೂಚನೆ ಮೇರೆಗೆ ರಿಯಾಲಿಟಿ ಶೋ ನಡೆಸಲು ಅನುಮತಿ ನೀಡಲಾಗಿದೆ ಎನ್ನಲಾಗಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಡಿಸಿಎಂ ಡಿಕೆಶಿ, ಬಿಗ್ ಬಾಸ್ ಕನ್ನಡ ಚಿತ್ರೀಕರಣ ನಡೆಯುತ್ತಿರುವ ಬಿಡದಿಯಲ್ಲಿರುವ ಜಾಲಿವುಡ್ ಆವರಣದಲ್ಲಿ ಸೀಲ್ ತೆಗೆಯುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ.

ಪರಿಸರದ ಅನುಸರಣೆಯು ಪ್ರಮುಖ ಆದ್ಯತೆಯಾಗಿ ಉಳಿದಿದೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಉಲ್ಲಂಘನೆಗಳನ್ನು ಪರಿಹರಿಸಲು ಸ್ಟುಡಿಯೋಗೆ ಸಮಯವನ್ನು ನೀಡಲಾಗುತ್ತದೆ. ಕನ್ನಡ ಮನರಂಜನಾ ಉದ್ಯಮವನ್ನು ಬೆಂಬಲಿಸಲು ನಾನು ಬದ್ಧನಾಗಿರುತ್ತೇನೆ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ನಮ್ಮ ಜವಾಬ್ದಾರಿಯನ್ನು ಎತ್ತಿಹಿಡಿಯುತ್ತೇನೆ ಎಂದು ಹೇಳಿದ್ದಾರೆ.