ನ್ಯೂಸ್

Bigg Boss ಮನೆಗೆ ಎಂಟ್ರಿ ಕೊಟ್ಟ ಕತ್ತೆ!..ಶಾಕ್​​​ನಲ್ಲಿ ಪ್ರೇಕ್ಷಕರು.. ವಿಡಿಯೋ ವೈರಲ್

ಮುಂಬೈ: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ ( Bigg Boss ) ಕನ್ನಡ ಸೀಸನ್ 11 ವಾರದ ಹಿಂದೆ ಶುರುವಾಗಿದೆ. ಇದು ರೋಚಕವೂ ಆಗಿದೆ. ಓರ್ವ ಸ್ಪರ್ಧಿ ಕೂಡಾ  ಮನೆಯಿಂದ ಹೊರ ಬಂದಿದ್ದಾರೆ. ಕನ್ನಡ ಸೇರಿದಂತೆ, ತೆಲಗು, ತಮಿಳು, ಹಿಂದಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್ ( Bigg Boss )​​ ಎಲ್ಲಾ ಭಾಷೆಯಲ್ಲೂ ವಿಶೇಷವಾಗಿ ಜನಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿ ಹೊರಹೊಮ್ಮುತ್ತಿದೆ.

ಖ್ಯಾತ ನಟ ಸಲ್ಮಾನ್ ಖಾನ್ ನಡೆಸಿಕೊಡುವ 'ಬಿಗ್ ಬಾಸ್ 18' ಕಾರ್ಯಕ್ರಮವು  ವಿವಿಧ ಕ್ಷೇತ್ರಗಳ ಅನೇಕ ಸೆಲೆಬ್ರಿಟಿಗಳು ಸ್ಪರ್ಧಿಗಳಾಗಿ ಮನೆ ಪ್ರವೇಶಿಸಿದ್ದಾರೆ. ಆದರೆ ಹಿಂದಿಯ ಬಿಗ್ ಬಾಸ್ ಮನೆಗೆ ಈಗ ವಿಶೇಷವಾಗಿ ಕತ್ತೆಯೂ ( donkey ) ಪ್ರವೇಶಿಸಿದೆ. ಇದರಿಂದ ಸ್ಪರ್ಧಿಗಳು ಹಾಗೂ ಪ್ರೇಕ್ಷಕರು ಅಚ್ಚರಿಗೊಂಡಿದ್ದಾರೆ. ಕಲರ್ಸ್ ಚಾನೆಲ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಪೋಸ್ಟ್ ಮಾಡಿದೆ. ಇದೀಗ ಈ ವಿಡಿಯೋ ( video ) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನು ನೋಡಿದ ಅಭಿಮಾನಿಗಳು ಮತ್ತು ನೆಟ್ಟಿಗರು ಕ್ರೇಜಿ ಕಮೆಂಟ್ಸ್ ಮಾಡುತ್ತಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ಕತ್ತೆ ಯಾವುದು? ಕತ್ತೆಯೂ ಸ್ಪರ್ಧಿಯಾಗಿ ಆಯ್ಕೆಯಾಗಿದೆಯೇ? ಕತ್ತೆಗೂ ಬಹುಮಾನ ಸಿಗುತ್ತದೆಯೇ? ಅವರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.

ಖ್ಯಾತ ವಕೀಲ ಗುಣರತ್ನ ಸದಾವರ್ತೆ ಅವರು ಬಿಗ್ ಬಾಸ್ ಸೀಸನ್ 8 ಗೆ ಸ್ಪರ್ಧಿಯಾಗಿ ಪ್ರವೇಶಿಸಿದರು. ಇದೀಗ ಇವರ ಜೊತೆಗೆ ಅವರು ಸಾಕಿದ ಕತ್ತೆಯೂ ಮನೆ ಪ್ರವೇಶಿಸಿದೆ.  ಗುಣರತ್ನ ಸದಾವರ್ತ ಜೊತೆಗೆ ಈ ಕತ್ತೆ ಕೂಡ ಬಿಗ್ ಬಾಸ್ ಮನೆಯಲ್ಲಿ ಇರಲಿದೆ ಎಂಬ ಸುದ್ದಿ ಬಂದಿದೆ. ಮತ್ತು ಇತರ ಸ್ಪರ್ಧಿಗಳು ಇದನ್ನು ಒಪ್ಪುತ್ತಾರೆಯೇ? ಎಂದು ತಿಳಿಯಬೇಕಿದೆ.

ಈ ಹಿಂದೆ 'ಬಿಗ್ ಬಾಸ್ ಕನ್ನಡ ಸೀಸನ್ 10'ರಲ್ಲಿ '777 ಚಾರ್ಲಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ಶ್ವಾನ ಕಾಣಿಸಿಕೊಳ್ಳಲಿದೆ ಎಂಬ ಸುದ್ದಿ ಹರಡಿತ್ತು. ಈ ಬಗ್ಗೆ ಅಧಿಕೃತ ಹೇಳಿಕೆ ಕೂಡ ಬಿಡುಗಡೆಯಾಗಿತ್ತು. ಆದರೆ ಕಾರಣಾಂತರಗಳಿಂದ ನಾಯಿ ಬಿಗ್ ಬಾಸ್ ಮನೆಗೆ ಪ್ರವೇಶಿಸಿರಲಿಲ್ಲ. ಇದೀಗ ಹಿಂದಿ ಬಿಗ್​ಬಾಸ್​​ ಮನೆಗೆ ಕತ್ತೆ ಎಂಟ್ರಿ ಕೊಟ್ಟಿದ್ದು  ಸಖತ್​​ ಸುದ್ದಿಯಲ್ಲಿದೆ.