ಹೈದ್ರಾಬಾದ್: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ಬಾಸ್ ( Bigg Boss ) ಕಾರ್ಯಕ್ರನಕ್ಕೆ ನಟ, ನಟಿಯರು ಹಾಗೂ ಜನಪ್ರಿಯ ಸೆಲೆಬ್ರೆಟಿಗಳು ಬರುವುದು ವಾಡಿಕೆಯಾಗಿದೆ. ಈ ಬಾರಿ ಸ್ಟಾರ್ ನಿರ್ಮಾಪಕರೊಬ್ಬರು ಎಂಟ್ರಿಕೊಟ್ಟಿದ್ದಾರೆ. ಕನ್ನಡ, ಹಿಂದಿಮ ತೆಲಗು, ತಮಿಳಿನಲ್ಲಿ ಪ್ರಸಾರವಾಗುವ ಬಿಗ್ಬಾಸ್ ಹೆಚ್ಚು ಜನಮನ್ನಣೆ ಪಡೆದಿರುವ ಕಾರ್ಯಕ್ರಮ ಕೂಡಾ ಆಗಿದೆ.
ಇದೀಗ ಬಿಗ್ ಬಾಸ್ ಸೀಸನ್ ನಡೆಯುತ್ತಿದೆ. ತೆಲುಗು ಅಲ್ಲದೆ ಜನಪ್ರಿಯ ಭಾಷೆಗಳಲ್ಲಿ ಕಿರುತೆರೆಯಲ್ಲಿ ಈ ರಿಯಾಲಿಟಿ ಶೋ ಸದ್ದು ಮಾಡುತ್ತಿದೆ. ತೆಲುಗಿನಲ್ಲಿ ಬಿಗ್ ಬಾಸ್ ಸೀಸನ್ 8 ( bigg boss 8 tamil )ಭರದಿಂದ ಸಾಗುತ್ತಿದ್ದರೆ, ವಾರದ ಹಿಂದೆಯಷ್ಟೇ ಕನ್ನಡದಲ್ಲಿ ರಿಯಾಲಿಟಿ ಶೋ ಅಬ್ಬರದಿಂದ ಆರಂಭವಾಗಿದೆ. ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬರುತ್ತಿದೆ.
ಭಾನುವಾರ (ಅಕ್ಟೋಬರ್ 06) ಬಿಗ್ ಬಾಸ್ ತಮಿಳು ಸೀಸನ್-8 ಅಬ್ಬರದಿಂದ ಆರಂಭವಾಗಿದೆ. ಕಮಲ್ ಹಾಸನ್ ಕಳೆದ ಏಳು ಸೀಸನ್‌ಗಳಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಈಗ ಅವರ ಸ್ಥಾನಕ್ಕೆ ವಿಜಯ್ ಸೇತುಪತಿ ಬಂದಿದ್ದಾರೆ.
ಈ ಸೀಸನ್ ನಲ್ಲಿ ಒಟ್ಟು 18 ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದಾರೆ. ವಿವಿಧ ಕ್ಷೇತ್ರಗಳ ಅನೇಕ ಗಣ್ಯರು ಭಾನುವಾರ ಮನೆಗೆ ಪ್ರವೇಶಿಸಿದರು. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿಯಲ್ಲಿ ತಮಿಳಿನ ಖ್ಯಾತ ನಿರ್ಮಾಪಕ ಹಾಗೂ ಲಿಬ್ರಾ ಪ್ರೊಡಕ್ಷನ್ಸ್ ಮುಖ್ಯಸ್ಥ ರವೀಂದರ್ ಚಂದ್ರಶೇಖರನ್ ಕೂಡ ಇದ್ದಾರೆ. ಅವರು ಈ ಹಿಂದೆ ಜನಪ್ರಿಯ ಕಿರುತೆರೆ ನಟಿ ಮಹಾಲಕ್ಷ್ಮಿ ಅವರನ್ನು ವಿವಾಹವಾದ ನಂತರ ಸುದ್ದಿಯಲ್ಲಿದ್ದರು. ಆಗ ಇವರಿಬ್ಬರ ಮದುವೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಹರಿದಾಡಿದ್ದವು.ಹಣಕ್ಕಾಗಿ ಮಹಾಲಕ್ಷ್ಮಿ ರವೀಂದರ್ ಅವರನ್ನು ಮದುವೆಯಾಗಿದ್ದಾರೆ ಎಂದು ನೆಟಿಜನ್‌ಗಳು ನಟಿಯನ್ನು ಟ್ರೋಲ್ ಮಾಡಿದ್ದಾರೆ. ರವೀಂದರ್ ಅವರು ಭಾರೀ ತೂಕದ ಬಗ್ಗೆ ನಕಾರಾತ್ಮಕ ಕಾಮೆಂಟ್ಗಳು ಬಂದಿದ್ದವು. ಆದರೆ ಅದೆಲ್ಲವನ್ನೂ ಲೆಕ್ಕಿಸದೆ ದಾಂಪತ್ಯ ಜೀವನ ನಡೆಸುತ್ತಿದ್ದಾರೆ ಈ ಜೋಡಿ.
ಈ ಜೋಡಿ ಸೋಷಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಸಕ್ರಿಯವಾಗಿದೆ. ಈ ಹಿನ್ನಲೆಯಲ್ಲಿ ರವೀಂದರ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ಮತ್ತು ವಿವಾದಗಳಿಂದಲೇ ಹೆಚ್ಚಾಗಿ ಸುದ್ದಿಯಲ್ಲಿರುವ ಇವರು ಬಿಗ್ ಬಾಸ್ ಪ್ರೇಕ್ಷಕರನ್ನು ಎಷ್ಟರಮಟ್ಟಿಗೆ ಆಕರ್ಷಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.