- ಕರೊನಾ ಬಳಿಕ ಬದಲಾದ ಜನರ ಪ್ರವೃತ್ತಿ
- ಕಷ್ಟಕಾಲದಲ್ಲಿ ಬಳಕೆ ಮಾಡಲು ತುರ್ತನಿಧಿ ನಿರ್ವಣಕ್ಕೆ ಜನಸಾಮಾನ್ಯರ ಆದ್ಯತೆ
- ಉತ್ತಮ ಲಾಭದ ಮೇಲೂ ಚಿತ್ತ
- ಪಿಪಿಎಫ್ ಖಾತೆಗಳಿಗೆ ಹಣದ ಹರಿವು
- ಈ ವರ್ಷ ಬಡ್ಡಿದರ ಏರಿಕೆಯಾಗುವ ಸಾಧ್ಯತೆ ಇರುವ ಕಾರಣ ಹೂಡಿಕೆ ಮತ್ತಷ್ಟು ಹೆಚ್ಚುವ ನಿರೀಕ್ಷೆ
ಪಿಪಿಎಫ್ ಖಾತೆಯತ್ತ ಒಲವು ಏಕೆ?
- ಉಳಿತಾಯ ಖಾತೆ, ನಿಶ್ಚಿತ ಠೇವಣಿ ಯೋಜನೆಯಲ್ಲಿ ಬಡ್ಡಿ ಕಡಿಮೆ
- ಪಿಪಿಎಫ್ನಲ್ಲಿ ಇವುಗಳಿಗಿಂತ ತುಸು ಹೆಚ್ಚಿನ ಬಡ್ಡಿ ಲಭ್ಯ
- ಸುರಕ್ಷತೆಯೂ ಅಧಿಕ
- ತೆರಿಗೆ ಉಳಿತಾಯ ಸಹಿತ ಹಲವು ಸೌಲಭ್ಯಗಳು ಲಭ್ಯ
- ನ್ಯಾಷನಲ್ ಸೇವಿಂಗ್ ಸರ್ಟಿಫಿಕೆಟ್ ಸಹಿತ ಇತರ ನಿಶ್ಚಿತ ಅವಧಿ ಯೋಜನೆಯಲ್ಲಿ ಶೇ. 21.2 ಏರಿಕೆ.
- 2021-22ರ ಸಾಲಿನಲ್ಲಿ ಒಟ್ಟಾರೆ ಉಳಿತಾಯ ಶೇ. 21.8ಕ್ಕೆ ಏರಿಕೆ.
- ಅದಕ್ಕೂ ಹಿಂದಿನ ವರ್ಷ ಶೇ. 8.8 ಮಾತ್ರ ಏರಿಕೆ ದಾಖಲಾಗಿತ್ತು.
- ಇತ್ತೀಚೆಗೆ ಮಂಡನೆಯಾದ ಕೇಂದ್ರ ಬಜೆಟ್ ದಾಖಲೆಗಳಿಂದ ಮಾಹಿತಿ.