ನ್ಯೂಸ್

ಉಗ್ರರಿಗಾಗಿ ಬಿಗ್ ಆಪರೇಷನ್; ಪಹಲ್ಗಾಮ್ ವಿಮಾನದಲ್ಲಿ ಶಂಕಿತರಿರುವ ಶಂಕೆ; ಕೊಲಂಬೊದಲ್ಲಿ ವಿಮಾನ ಶೋಧ| Terror attack

Terror attack | ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಹೇಳಲಾದ ಆರು ಶಂಕಿತ ಉಗ್ರರು ಚೆನ್ನೈನಿಂದ ವಿಮಾನದಲ್ಲಿ ಶ್ರೀಲಂಕಾ ತಲುಪಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ಇಂದು ಮಧ್ಯಾಹ್ನ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿದೆ.

ಭಾರತದ ಚೆನ್ನೈನಿಂದ ಆಗಮಿಸಿದ ಶ್ರೀಲಂಕಾದ ಏರ್ಲೈನ್ಸ್ ವಿಮಾನವು ಬಿಐಎನಲ್ಲಿ ವಿಶೇಷ ಭದ್ರತಾ ಕಾರ್ಯಾಚರಣೆಗೆ ಒಳಗಾಯಿತು. ಚೆನ್ನೈನಿಂದ ಬಂದ ವಿಮಾನದಲ್ಲಿ ಆರು ಶಂಕಿತ ಭಯೋತ್ಪಾದಕರು ಇರುವ ಬಗ್ಗೆ ಭಾರತದಿಂದ ಬಂದ ಎಚ್ಚರಿಕೆಯ ಮೇರೆಗೆ ಶ್ರೀಲಂಕಾದ ಅಧಿಕಾರಿಗಳು ವಿಮಾನ ಬಂದ ಕೂಡಲೇ ಶೋಧ ನಡೆಸಿದ್ದಾರೆ.

ಪಹಲ್ಗಾಮ್‌ನಲ್ಲಿ 26 ಮಂದಿ ಜೀವ ತೆಗೆದ ಭಯೋತ್ಪಾದಕರಿಗಾಗಿ ಶ್ರೀಲಂಕಾದ ಕೊಲಂಬೊದಲ್ಲಿ ಇದೀಗ ಹುಟುಕಾಟ ಆರಂಭವಾಗಿದೆ. ಕೊಂಲಬೊದಲ್ಲಿರುವ ಬಂಡಾರನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸರ್ಚ್ ಆಪರೇಷನ್ ನಡೆಸಲಾಗ್ತಿದೆ.

(ಏಜೆನ್ಸೀಸ್)

ಇಂದು (ಮೇ.3) ಬೆಳಗ್ಗೆ 9:55ಕ್ಕೆ ಚೆನ್ನೈನಿಂದ ಹೊರಟಿದ್ದ ವಿಮಾನದಲ್ಲಿ ಭಯೋತ್ಪಾದಕರ ಕುರಿತು ಭಾರತೀಯ ಗುಪ್ತಚರ ಇಲಾಖೆ ಶ್ರೀಲಂಕಾ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಈ ಹಿನ್ನೆಲೆ ಶ್ರೀಲಂಕಾ ಏರ್‌ಲೈನ್ಸ್‌ನ UL-122 ವಿಮಾನವು 11:32ರ ವೇಳೆಗೆ ಕೊಲಂಬೊದಲ್ಲಿ ಲ್ಯಾಂಡ್‌ ಆಗುತ್ತಿದ್ದಂತೆ ಭದ್ರತಾ ಅಧಿಕಾರಿಗಳು ತೀವ್ರ ಶೋಧ ನಡೆಸಿದರು. ಈ ಹಿನ್ನೆಲೆ ಸಿಂಗಾಪುರಕ್ಕೆ ತಲುಪಬೇಕಿದ್ದ ವಿಮಾನ ಸೇವೆಯಲ್ಲಿ ಕೊಂಚ ವ್ಯತ್ಯಯವಾಯಿತು ಎಂದು ಶ್ರೀಲಂಕಾದ ಏರ್‌ಲೈನ್ಸ್‌ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.