ಮಾಧ್ಯಮಗಳ ವಿರುದ್ಧ ಅಮಿತಾಭ್ ಬಚ್ಚನ್ ಆಕ್ರೋಶ 
ನ್ಯೂಸ್

ಮಾಧ್ಯಮಗಳಿಗೆ ಬಿಗ್ ಬಿ ವಾರ್ನಿಂಗ್: 'ನಾನು ಸನ್ನೆ ಮಾಡಿದ್ರೆ ಸಾಕು ಫಾಲೋವರ್ಸ್ ನಿಮ್ಮನ್ನ ಬಿಡಲ್ಲ'! | Amitabh media warning

ಶ್ರೀಕೃಷ್ಣನ ಕುರಿತ ಪೋಸ್ಟ್ ಅನ್ನು ಮಾಧ್ಯಮಗಳು ತಪ್ಪಾಗಿ ರೋರಿದ್ದಕ್ಕೆ ಅಮಿತಾಭ್ ಕಿಡಿ

ಬ್ಲಾಗ್‌ ಮೂಲಕ ಮಾಧ್ಯಮಗಳಿಗೆ ನೇರ ಹಾಗೂ ಖಡಕ್ ಎಚ್ಚರಿಕೆ ರವಾನಿಸಿದ ಬಿಗ್ ಬಿ

ಒಂದು ಸನ್ನೆ ಮಾಡಿದರೆ ಸಾಕು ನನ್ನ ಫಾಲೋವರ್ಸ್ ನಿಮ್ಮನ್ನ ಬಿಡಲ್ಲ ಎಂದು ವಾರ್ನ್​

Amitabh Bachchan blog post: ಶ್ರೀಕೃಷ್ಣನ ಕುರಿತ ತಮ್ಮ ಪೋಸ್ಟ್ ಅನ್ನು ಮಾಧ್ಯಮಗಳು ಅಪಾರ್ಥ ಮಾಡಿಕೊಂಡು ವರದಿ ಮಾಡಿದ್ದಕ್ಕೆ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಬಗ್ಗೆ ತಮ್ಮ ಬ್ಲಾಗ್‌ನಲ್ಲಿ ಸುದೀರ್ಘವಾಗಿ ಬರೆದುಕೊಂಡಿರುವ ಬಿಗ್ ಬಿ, ಮಾಧ್ಯಮಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿರೋ ಅಮಿತಾಭ್, 'ಮಾಧ್ಯಮದವರೇ ಕಿವಿ ಹಿಡಿದು ಕೇಳಿಸಿಕೊಳ್ಳಿ. ನನಗೆ 5 ಕೋಟಿ ಫಾಲೋವರ್ಸ್‌ ಇದ್ದಾರೆ. ನಾನು ಸುಮ್ಮನೆ ಒಂದು ಸಣ್ಣ ಸನ್ನೆ ಮಾಡಿದ್ರೂ ಸಾಕು, ಅವರಲ್ಲಿ 10% ಜನ ನಿಮ್ಮನ್ನ ಬಿಡದೆ ತರಾಟೆಗೆ ತಗೋಳೋಕೆ ಕಾಯುತ್ತಿದ್ದಾರೆ' ಅಂತ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.

ಮಾಧ್ಯಮಗಳಿಗೆ ಖಡಕ್ ವಾರ್ನಿಂಗ್​

ನನ್ನ ಮಾತುಗಳನ್ನು ಎಷ್ಟೇ ತಿರುಚಿ ಬರೆದರೂ ಅಥವಾ ಟೀಕಿಸಿದರೂ, ನನ್ನ ಕೋಟ್ಯಂತರ ಅಭಿಮಾನಿಗಳಿಗೆ ಅದಕ್ಕೆ ನೂರರಷ್ಟು ಪಟ್ಟು ಜೋರಾಗಿ ತಿರುಗೇಟು ಕೊಡುವ ಶಕ್ತಿ ಇದೆ. ಅದಕ್ಕೆ ನಾನೇನಾದ್ರೂ ಒಂದೇ ಒಂದು ಮಾತು ಆಡಿದರೆ ಸಾಕು ಅಂತ ಮಾಧ್ಯಮಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.

ತಪ್ಪು ಒಪ್ಪಿಕೊಳ್ಳುವುದನ್ನು ಕಲಿಯಿರಿ

ಕೆಲ ಮಾಧ್ಯಮಗಳನ್ನು ದೇಶದ "ಫಿಫ್ತ್ ಕಾಲಮ್" (ಆಂತರಿಕ ವಿಘಾತಕ ಶಕ್ತಿ) ಎಂದು ಕರೆದಿರುವ ಅಮಿತಾಭ್, ತಮ್ಮ ಮಾತುಗಳನ್ನು ಅಪಾರ್ಥ ಮಾಡಿಕೊಂಡಿದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ‘ಮನುಷ್ಯರಾದ ಮೇಲೆ ತಪ್ಪುಗಳಾಗುವುದು ಸಹಜ, ಅದನ್ನು ಒಪ್ಪಿಕೊಂಡು ಕ್ಷಮೆ ಕೇಳಿ ತಿದ್ದುಕೊಳ್ಳಬೇಕು. ಆದರೆ ಕೆಲ ಮಾಧ್ಯಮಗಳು ತಪ್ಪು ಮಾಡುವುದನ್ನೇ ತಮ್ಮ ಜನ್ಮಸಿದ್ಧ ಹಕ್ಕು ಎಂಬಂತೆ ನಡೆದುಕೊಳ್ಳುತ್ತಿವೆ’ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕಂಟ್ರೋಲ್ ತಪ್ಪಿದ ನಗರಗಿರಿ ಟೌನ್‌ಶಿಪ್ ರಸ್ತೆ ರಂಪಾಟ: ವೃದ್ಧರು, ಮಹಿಳೆಯರ ಮೇಲೆಯೂ ಅಟ್ಯಾಕ್ | Nagargiri Township Controversy

ನಾನು ನನ್ನನ್ನು ಸಂತ್ರಸ್ತ ಅಂತ ಹೇಳಿಕೊಳ್ಳಲ್ಲ

ತುಂಬಾ ನೊಂದಿರೋ ಒಬ್ಮ ಮನುಷ್ಯನಾಗಿ, ಸುಮ್ಮನೆ ಪ್ರೀತಿಯಿಂದ 'ನಾನು ನಿದ್ರೆ ಮಾಡೋಕೆ ಹೊರಟಿದ್ದೀನಿ' ಅಂತ ಹೇಳೋಣ ಅಂದಿದ್ದೆ. ಆದ್ರೆ ನಾನೇನು ನನ್ನನ್ನು ಸಂತ್ರಸ್ತ ಅಂತ ಅಂದುಕೊಳ್ಳಲ್ಲ. ನನ್ನ ನೋವು ಬರೀ ನನಗೆ ಮಾತ್ರ ಸೇರಿದ್ದು, ಅದನ್ನ ಅನುಭವಿಸೋ ಅರ್ಹತೆ ನಿಮಗಿಲ್ಲ’ ಅಂತ ಹೇಳಿ ಅಮಿತಾಭ್ ತಮ್ಮ ಬ್ಲಾಗ್ ಮುಗಿಸಿದ್ದಾರೆ.