ನ್ಯೂಸ್

ಅಪ್ಪಯ್ಯನ ಜತೆ ಸೇರಿ ಬಿಸಿ ಬಿಸಿ ಮುದ್ದೆ ಮಾಡಿ ಬಡಿಸಿದ ಡ್ರೋನ್ ಪ್ರತಾಪ್; ವಿಡಿಯೋ ನೋಡಿ

ಬೆಂಗಳೂರು: ಬಿಗ್‌ಬಾಸ್‌ ಸೀಸನ್​ 10ರ ರನ್ನರ್ ಅಪ್​ ಡ್ರೋನ್​ ಪ್ರತಾಪ್​​ ಸಾಕಷ್ಟು ಸುದ್ದಿಯಲ್ಲಿರುವ ಸೆಲೆಬ್ರೆಟಿ. ಬಿಗ್​ಬಾಸ್ ಶೋನಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿ ಗಮನ ಸೆಳೆದಿದ್ದ ಪ್ರತಾಪ್‌ ಇದೀಗ, ತಂದೆ ಜತೆ ಮನೆಯಲ್ಲಿ ರಾಗಿ ಮುದ್ದೆ ಮಾಡಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಬಿಗ್​ಬಾಸ್​ ಮನೆಯಿಂದ ಬರುತ್ತಿದ್ದಂತೆ ಡ್ರೋನ್​ ಪ್ರತಾಪ್​​ ಮನೆಗೆ ಹೋಗಿದ್ದಾರೆ. ಈ ವೇಳೆ ಕುಟುಂಬಸ್ಥರ ಜತೆ ಕೂತು ಊಟ ಮಾಡಿದ್ದಾರೆ. ಡ್ರೋನ್ ಪ್ರತಾಪ್‌ಗೆ ಮುದ್ದೆ ಅಂದ್ರೆ ಬಹಳ ಇಷ್ಟ, ಹೀಗಾಗಿ ಅಪ್ಪನ ಜತೆ ಸೇರಿ ಮುದ್ದೆ ಮಾಡಿ, ಮನೆಯವರಿಗೆಲ್ಲ ಬಡಿಸಿದ್ದಾರೆ.  ಪ್ರತಾಪ್‌, ತಂದೆ ಜತೆ ಮುದ್ದೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಕುಟುಂಬದಿಂದ ಹಲವು ವರ್ಷಗಳು ದೂರವಿದ್ದ ಪ್ರತಾಪ್‌, ಬಿಗ್‌ ಬಾಸ್‌ ಶೋನಿಂದ ತಂದೆ-ತಾಯಿಯನ್ನು ಭೇಟಿಯಾಗುವಂತಾಯಿತು. ಈ ಹಿಂದೆ ದೊಡ್ಮನೆಯಲ್ಲಿ ಸ್ಪರ್ಧಿಗಳಿಗೆ ರಾಗಿ ಮುದ್ದೆ ಮಾಡಿಟ್ಟು ಗಮನ ಸೆಳೆದಿದ್ದ ಪ್ರತಾಪ್‌ ಇದೀಗ, ಅಪ್ಪನ ಜತೆ ಮುದ್ದೆ ಮಾಡಿ ಮನೆ ಮಂದಿಗೆ ಬಡಿಸಿರುವುದು ಕಂಡುಬಂದಿದೆ.

ಬಿಗ್‌ ಬಾಸ್‌ ಶೋದಲ್ಲಿ ರನ್ನರ್‌ ಅಪ್‌ ಆಗಿ ಪ್ರೇಕ್ಷಕರ ಮನಗೆದ್ದಿರುವ ಪ್ರತಾಪ್‌ ಇದೀಗ, ಕಲರ್ಸ್‌ ಕನ್ನಡದ ʻಗಿಚ್ಚಿ ಗಿಲಿಗಿಲಿʼ ಕಾರ್ಯಕ್ರಮದ ಕಂಟೆಸ್ಟೆಂಟ್ ಆಗಿ ಆಯ್ಕೆಯಾಗಿದ್ದಾರೆ.