ನ್ಯೂಸ್

ಡಿಜೆ ಧ್ವನಿವರ್ಧಕ ವಿಚಾರವಾಗಿ ಎರಡು ಸಮುದಾಯದ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಬಲಿ

ಬೀದರ್ : ಎರಡು ಸಮುದಾಯಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಮೃತಪಟ್ಟಿರುವ ಘಟನೆ ಭಾಲ್ಕಿ ತಾಲೂಕಿನ ಸಿಕಂದ್ರಾಬಾದ್​ ವಾಡಿ ಗ್ರಾಮದಲ್ಲಿ ನಡೆದಿದೆ.


ಡಿಜೆ ಧ್ವನಿವರ್ಧಕ ವಿಚಾರವಾಗಿ ನಡೆದ ಜಗಳದಲ್ಲಿ ಜರ್ರೆಪ್ಪ ಎಂಬುವರನ್ನು ಗುಂಪು ಹಲ್ಲೆ ನಡೆಸಿ ಹತ್ಯೆ ಮಾಡಲಾಗಿದೆ.
ಹೊಸ ವರ್ಷದಂದು ಬೈಕ್​ ರಿಪೇರಿ ಅಂಗಡಿ ಉದ್ಘಾಟನೆಗಾಗಿ ಗ್ರಾಮದಲ್ಲಿ ಡಿಜೆ ಧ್ವನಿವರ್ಧಕ ವ್ಯವಸ್ಥೆ ಮಾಡಲಾಗಿತ್ತು.

ಈ ವಿಚಾರವಾಗಿ ಗ್ರಾಮದಲ್ಲಿರುವ 2 ಸಮುದಾಯಗಳ ನಡುವೆ ಜಗಳ ಆರಂಭವಾಯಿತು. ಜಗಳ ಹಿಂಸೆಗೆ ತಿರುಗಿತು. ಹಲ್ಲೆಯಿಂದ ತೀವ್ರ ಗಾಯಗೊಂಡು ಓರ್ವ ಮೃತಪಟ್ಟ. ಕೂಡಲೇ ಪೊಲೀಸರು ಗ್ರಾಮಕ್ಕೆ ಆಗಮಿಸಿ ಮಾರಾಮರಿ ತಪ್ಪಿಸಿದರು.


ಗ್ರಾಮದಲ್ಲಿ ಉದ್ರಿಕ್ತ ಸ್ಥಿತಿ ಇದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಖಟಕಚಿಂಚೋಳಿ ಠಾಣೆಯಲ್ಲಿ ಕೇಸು ದಾಖಲಾಗಿದೆ.