ಲುಧಿಯಾನ: ಪಂಜಾಬ್ನ ಲುಧಿಯಾನದ ಎಂಟನೇ ಕ್ಲಾಸ್ನ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ನೆರವಿನೊಂದಿಗೆ ವಿಶಿಷ್ಟವಾದ ಸ್ಕೂಟರ್ ಸೈಕಲ್ ಅನ್ನು ಸಿದ್ಧಪಡಿಸಿದ್ದಾನೆ. ಆ ಸ್ಕೂಟರ್ ಸೈಕಲ್ ಈಗ ಅಲ್ಲಿನ ಜನರ ಗಮನಸೆಳೆಯುತ್ತಿದ್ದು, ಸುದ್ದಿಯ ಕೇಂದ್ರ ಬಿಂದುವಾಗಿದೆ.
ವಿದ್ಯಾರ್ಥಿಯ ಹೆಸರು ಹರ್ಮನ್ಜೋತ್ ಸಿಂಗ್. ಈತ ಸಿದ್ಧಪಡಿಸಿರುವ ಸ್ಕೂಟರ್ ಸೈಕಲ್ ಮುಂಭಾಗದಿಂದ ನೋಡಿದ್ರೆ ಸ್ಕೂಟರ್ ನಂತೆ ಗೋಚರಿಸುತ್ತದೆ. ಹಿಂಬದಿಯಿಂದ ನೋಡಿದ್ರೆ ಸೈಕಲ್ ರೀತಿಯೂ ಕಾಣುತ್ತಿದೆ. ಈ ಹೈಬ್ರಿಡ್ ವಾಹನವೀಗ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ಹರ್ಮನ್ಜೋತ್ ಸಿಂಗ್ ಎಎನ್ಐಗೆ ತಿಳಿಸಿದ್ದಿಷ್ಟು- ಕೋವಿಡ್-19 ಕಾರಣಕ್ಕೆ ನನಗೆ ಹೊಸ ಸೈಕಲ್ ತೆಗೆಸಿಕೊಡುವುದು ಅಪ್ಪನಿಂದ ಸಾಧ್ಯವಾಗಲಿಲ್ಲ. ಹಾಗಾಗಿ ನಾವು ಇದನ್ನು ಮಾಡಿದ್ವಿ. ಇದರ ವೆಚ್ಚ 10,000 ರೂಪಾಯಿ ಆಗಬಹುದು. ಹದಿನೈದು ದಿವಸ ಬೇಕಾಯ್ತು ಇದನ್ನು ಸಿದ್ಧಪಡಿಸೋದಕ್ಕೆ. ಗ್ರಾಮದಲ್ಲಿ ಇದೀಗ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. (ಏಜೆನ್ಸೀಸ್)