ನ್ಯೂಸ್

ಪಕ್ಷಭೇದ ಮರೆತು ಅಭಿವೃದ್ಧಿಗೆ ಒತ್ತು

ಮುನವಳ್ಳಿ: ಬಿಡಿಸಿಸಿ ಬ್ಯಾಂಕ್‌ಗೆ ದ್ವಿತೀಯ ಬಾರಿ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಗೊಂಡ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಅವರು, ತಮ್ಮ ಆಯ್ಕೆಗೆ ಶ್ರಮಿಸಿದ ಸವದತ್ತಿ ತಾಲೂಕಿನ 103 ಪಿಕೆಪಿಎಸ್‌ಗಳ ಆಡಳಿತ ಮಂಡಳಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಲು ಶನಿವಾರ ಪಟ್ಟಣದ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು.

ಸಮಾರಂಭ ಉದ್ದೇಶಿಸಿ ಮಾತನಾಡಿದ ಆನಂದ ಮಾಮನಿ, ಬಿಡಿಸಿಸಿ ಬ್ಯಾಂಕ್‌ಗೆ ನಿರ್ದೇಶಕನಾಗುವ ಮುಂಚೆ ಸವದತ್ತಿ ತಾಲೂಕಿನಲ್ಲಿ ಪಿಕೆಪಿಎಸ್‌ಗಳ ಪರಿಸ್ಥಿತಿ ದಯನೀಯ ವಾಗಿತ್ತು. 2015 ರಲ್ಲಿ ಬಿಡಿಸಿಸಿ ಬ್ಯಾಂಕ್‌ನ ಚುನಾವಣೆಗೆ ಸ್ಪರ್ಧಿಸಿ ಗೆದ್ದ ನಂತರ ತಾಲೂಕಿನಲ್ಲಿದ್ದ 79 ಸಂಘಗಳನ್ನು ಪಕ್ಷಬೇಧ ಮರೆತು ಅಭಿವೃದ್ಧಿಪಡಿಸಿದ್ದೇನೆ. ಇಲ್ಲಿಯವರೆಗೆ 25 ಹೊಸ ಪಿಕೆಪಿಎಸ್ ಸ್ಥಾಪಿಸಿ, ಒಟ್ಟು 103 ಸಂಘಗಳಿಗೆ ಹಿಂದಿಗಿಂತಲೂ ಹೆಚ್ಚಿನ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಒದಗಿಸಿ ಅವರ ಆರ್ಥಿಕ ಅಭಿವೃದ್ಧಿ ಶ್ರಮಿಸಿದ್ದೇನೆ.

ತಾಲೂಕಿನಲ್ಲಿ 284 ಕೋಟಿ ರೂ. ಪತ್ತನ್ನು ಸಹಕಾರಿ ಸಂಘಗಳ ಮೂಲಕ ವಿತರಿಸಿದ್ದೇನೆ. ತಾಲೂಕಿನಲ್ಲಿ ಸ್ಥಗಿತಗೊಂಡಿದ್ದ ಇನಾಂಹೊಂಗಲ, ಶಿರಸಂಗಿ, ಕೊಟೂರ ಶಿವಾಪುರ ಬಿಡಿಸಿಸಿ ಬ್ಯಾಂಕ್ ಶಾಖೆಗಳನ್ನು ಪುನಃ ಆರಂಭಿಸಿದ್ದೇನೆ. ಮುಂಬರುವ ದಿನಗಳಲ್ಲಿ ಸವದತ್ತಿ ತಾಲೂಕಿನ 103 ಸಂಘಗಳಿಗೆ 500 ಕೋಟಿ ಸಾಲ ಮಂಜೂರು ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ ಎಂದು ಮಾಮನಿ ಅವರು ಭರವಸೆ ನೀಡಿದರು.

ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೇಲೆ ಆನಂದ ಮಾಮನಿ ಅವರು ಸವದತ್ತಿ ತಾಲೂಕಿನ ಸಹಕಾರಿ ಸಂಘಗಳ ಅಭಿವೃದ್ಧಿಗೆ ಸಾಕಷ್ಟು ಶ್ರಮವಹಿಸಿ ದುಡಿದಿದ್ದಾರೆ. ಜನರು ಅವರಿಗೆ ಅಗತ್ಯ ನೆರವು
ನೀಡಬೇಕು ಎಂದರು.

ರಮೇಶ ಗೋಮಾಡಿ, ವೇ.ಮೂ.ಚಂದ್ರಯ್ಯಸ್ವಾಮಿ ವಿರಕ್ತಮಠ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ ಶಿಂತ್ರಿ, ಎಪಿಎಂಸಿ ಅಧ್ಯಕ್ಷ ಪ್ರಕಾಶ ನರಿ, ಬಸಯ್ಯ ಹಿರೇಮಠ, ಈರಣ್ಣ ಚಂದರಗಿ, ಪುರಸಭೆ ಅಧ್ಯಕ್ಷ ವಿಜಯ ಅಮಠೆ, ಬಿಡಿಸಿಸಿ ಬ್ಯಾಂಕ್ ನಿವೃತ್ತ ಡೆಪ್ಯೂಟಿ ಮ್ಯಾನೇಜರ್ ಎಂ.ಎಫ್.ಮದ್ದಾನಿ, ಗೀತಾ ದೇಸಾಯಿ, ಬಿ.ಪಿ.ಪಾಟೀಲ, ಜಗದೀಶ ಕೌಜಗೇರಿ, ಪುಂಡಲೀಕ ಮೇಟಿ, ಸೋಮಶೇಖರ ಯಲಿಗಾರ, ಶ್ರೀಕಾಂತ ಮೀರಜಕರ, ಡಿ.ಎಸ್.ಬಡಗಿಗೌಡ್ರ, ಜಿ.ಬಿ.ಬಿರಾದಾರಗೌಡ್ರ, ಎಂ.ಎ.ಅಂಗಡಿ, ಮಾರುತಿ ಬಾರಕೇರ, ಗುರುಪಾದ ಕಳ್ಳಿ, ಸೋಮರಡ್ಡಿ ನಿಂಗರಡ್ಡಿ, ಬಿ.ಎಂ.ಅಂಗಡಿ, ಅಶೋಕ ಗೋಮಾಡಿ, ಅಶೋಕ ಪಟ್ಟಣಶೆಟ್ಟಿ, ಜಿ.ಬಿ.ಕುರಬಗಟ್ಟಿ, ವಾಸು ಮೇಟಿ, ಎಸ್.ಎಸ್.ಸಿದ್ದಣ್ಣವರ, ಪ್ರವೀಣ ಕೋಟಗಿ, ಉಮೇಶ ಹಿರೇಮಠ, ಯಲ್ಲನಗೌಡ ಪಾಟೀಲ, ಶಶಿಕಾಂತ ಗೊಣಿ, ಮಲ್ಲೇಶ್ವರ ಸೂಳೆಬಾವಿ, ಶಿಕ್ಷಕ ಬಿ.ಬಿ.ಹುಲಿಗೊಪ್ಪ, ಬಿಡಿಸಿಸಿ ಬ್ಯಾಂಕ್ ತಾಲೂಕು ನಿಯಂತ್ರಣಾಧಿಕಾರಿ ಸಿ.ಆರ್.ಪಾಟೀಲ ಇದ್ದರು.