ಭೋಪಾಲ್: ಅಂಕಲ್ ( Uncle ) ಎಂದು ಕರೆದಿದ್ದಕ್ಕೆ ಸೀರೆ ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಮಧ್ಯಪ್ರದೇಶದ ಬೋಪಾಲ್ ನಗರದ ಜತ್ಖೇಡಿ ಏರಿಯಾದಲ್ಲಿ ನಡೆದಿದೆ.
ಸೀರೆ ಅಂಗಡಿ ಮಾಲೀಕ ವಿಶಾಲ್ ಶಾಸ್ತ್ರಿ ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲ್ಲೆ ಮಾಡಿರುವ ರೋಹಿತ್. ಸದ್ಯ ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ನಡೆದಿದ್ದೇನು?: ತನ್ನ ಹೆಂಡತಿಗೆ ಸೀರೆ ಕೊಡಿಸಲೆಂದು ರೋಹಿತ್, ವಿಶಾಲ್ ಶಾಸ್ತ್ರಿ ಸೀರೆ ಅಂಗಡಿಗೆ ಬಂದಿದ್ದಾನೆ. ಈ ವೇಳೆ ವಿಶಾಲ್ ನಿಮಗೆ ಯಾವ ಬೆಲೆಯಲ್ಲಿ ಸೀರೆ ಬೇಕು ‘ಅಂಕಲ್‘ ಎಂದಿದ್ದಾನೆ. ಇದಕ್ಕೆ ರೋಹಿತ್ 1,000 ರೂ. ಬೆಲೆಯಲ್ಲಿ ಬೇಕು ಎಂದಿದ್ದಾರೆ. ಮತ್ತೆ ಇದಕ್ಕೆ ಪ್ರತಿಯಾಗಿ ಅಂಕಲ್ ಅದಕ್ಕಿಂತ ಹೆಚ್ಚಿನ ಬೆಲೆಯಲ್ಲಿ ಸೀರೆಗಳನ್ನು ನೋಡಿ ಎಂದಿದ್ದಾನೆ.
ಅಂಕಲ್ ಅಂತ ಕರೆಯಬೇಡ ಎಂದು ರೋಹಿತ್ ಗಲಾಟೆ ಮಾಡಿ, ಬೈದು ಹೆಂಡತಿಯನ್ನು ಕರೆದುಕೊಂಡು ಹೋಗಿದ್ದಾನೆ. ಪತ್ನಿಯನ್ನ ಮನೆಯಲ್ಲಿ ಬಿಟ್ಟು ಗ್ಯಾಂಗ್ ಕಟ್ಟಿಕೊಂಡು ವಾಪಸ್ ಬಂದು ಸೀರೆ ಅಂಗಡಿ ಮಾಲೀಕನಿಗೆ ಸರಿಯಾಗಿ ಥಳಿಸಿದ್ದಾರೆ.