ನ್ಯೂಸ್

ನಿವೃತ್ತ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

ತಿ.ನರಸೀಪುರ: ಪಟ್ಟಣದಲ್ಲಿ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಲಾಯಿತು.

ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಅಧ್ಯಕ್ಷ ಎಂ.ಮಹದೇವಯ್ಯ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹಾಗೂ ಸಂಸದ ಸುನೀಲ್ ಬೋಸ್ ಅವರಿಂದ ನಿವೃತ್ತ ನೌಕರರ ಸಂಘದ ಕಟ್ಟಡಕ್ಕೆ ಅನುದಾನ ನೀಡುವಂತೆ ಮನವಿ ಮಾಡಿದ್ದೇವೆ. ಇತರ ಮೂಲಗಳಿಂದ ಹಣ ಕ್ರೋಡೀಕರಿಸಿ ಸುಸಜ್ಜಿತ ಭವನ ನಿರ್ಮಾಣ ಮಾಡಲಾಗುವುದು ಎಂದರು.

ಸಂಘದ ಕಾರ್ಯದರ್ಶಿ ವೆಂಕಟರಮಣಸ್ವಾಮಿ ಮಾತನಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ನಿವೃತ್ತ ನೌಕರ ಸಂಘದ ಉಪಾಧ್ಯಕ್ಷ ಶಿವಣ್ಣ, ಸಹ ಕಾರ್ಯದರ್ಶಿ ಎಂ.ಗೋವಿಂದರಾಜು, ಖಜಾಂಚಿ ಸಿದ್ದೇಗೌಡ, ಲೆಕ್ಕ ಪರಿಶೋಧಕ ಕೆ.ಕೆಂಚಪ್ಪ, ನಿರ್ದೇಶಕ ಸಿ.ಲಿಂಗಯ್ಯ, ಕಲ್ಲಯ್ಯ, ಜವನಪ್ಪ, ರಂಗದಾಸಯ್ಯ, ಕೆ.ಬಸವರಾಜು, ಬೋರಯ್ಯ, ಸದಸ್ಯ ಡಿ.ಎಂ.ರಂಗಸ್ವಾಮಿ, ವೈ.ಕುಮಾರಸ್ವಾಮಿ, ಮೋಹನರಾಜು, ಮಲ್ಲೇಶ್, ವಿಜಯಕುಮಾರ್, ಎಂ.ಶಿವಣ್ಣ, ಚಂದ್ರಶೇಖರ ಆರಾಧ್ಯ, ಬಸವಣ್ಣ, ಹುಚ್ಚೇಗೌಡ, ದೊಡ್ಡೇಗೌಡ, ಮಹಾದೇವ, ವಿಜಯಕುಮಾರ್ ಇತರರು ಇದ್ದರು.