ಥಾಣೆ: ತ್ರಿವಳಿ ತಲಾಖ್ ದೇಶದಲ್ಲಿ ನಿಷೇಧವಾಗಿದ್ದರೂ ಇನ್ನೂ ಕೆಲವರು ಎಚ್ಚೆತ್ತುಕೊಂಡಿಲ್ಲ. ಹಾಗೇ ಥಾಣೆ ಜಿಲ್ಲೆಯ ಭಿವಂದಿಯಲ್ಲಿ ಓರ್ವ ಪತ್ನಿಗೆ ತ್ರಿವಳಿ ತಲಾಖ್ ನೀಡಿ ಅರೆಸ್ಟ್ ಆಗಿದ್ದಾನೆ.
ಖಾಲೀದ್ ಶೇಖ್ (27) ಬಂಧಿತ. ಮುಸ್ಲಿಂ ಮಹಿಳಾ ರಕ್ಷಣಾ ಕಾಯ್ದೆಯಡಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಆಗಸ್ಟ್ 29ರಂದು ತನ್ನ ಸಹೋದರಿಯ ಫೋನ್ನಲ್ಲಿ ಪತ್ನಿಗೆ ಕರೆ ಮಾಡಿ ಆಕೆಯೊಂದಿಗೆ ಜಗಳ ಆಡಿದ್ದ. ನಂತರ ಫೋನ್ನಲ್ಲಿಯೇ ತಲಾಖ್ ಎಂದು ಹೇಳಿದ್ದ.
ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು. ಕೂಡಲೇ ಕ್ರಮ ಕೈಗೊಂಡ ಪೊಲೀಸರು ಆತನನ್ನು ಬಂಧಿಸಿದ್ದಾರೆ ಎಂದು ಡೆಪ್ಯುಟಿ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.(ಏಜೆನ್ಸೀಸ್)