ಕಲಬುರಗಿ: ಮೀನು ಹಿಡಿಯಲು ಹೋದ ತಂದೆ-ಮಗ ಇಬ್ಬರೂ ಜಲಸಮಾಧಿಯಾದ ಘಟನೆ ವರ್ಗಿ ತಾಲೂಕಿನ ಕಟ್ಟಿಸಂಗಾವಿ ಬಳಿಯ ಭೀಮಾ ನದಿಯಲ್ಲಿ ಸಂಭವಿಸಿದೆ.
ಕಟ್ಟಿ ಸಂಗಾವಿ ಗ್ರಾಮದ ಮೆಹಬೂಬ್ ಪಟೇಲ್(60) ಮತ್ತು ಇವರ ಪುತ್ರ ಜಾವಿದ್ ಪಟೇಲ್(19) ಮೃತ ದುರ್ದೈವಿಗಳು. ಇವರಿಬ್ಬರೂ ಭೀಮಾ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದಾಗ ನೀರಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.