ಕಲಬುರಗಿ: ಭಾರತ್ ಬಂದ್ಗೆ ಬೆಂಬಲ ನೀಡದೆ ಎಂದಿನಂತೆ ತೆರೆದಿದ್ದ ಅಂಗಡಿಗಳನ್ನು ಪ್ರತಿಭಟನಾಕಾರರು ಒತ್ತಾಯಪೂರ್ವಕವಾಗಿ ಮುಚ್ಚಿಸುತ್ತಿದ್ದ ದೃಶ್ಯ ನಗರದಲ್ಲಿ ಕಂಡುಬಂತು.
ಅಂಗಡಿಗಳಿಗೆ ನುಗ್ಗಿದ ಪ್ರತಿಭಟನಾಕಾರರು ವಾಟರ್ಪೌಚ್ನಿಂದ ಹೊಡೆದು ದಾಂಧಲೆ ಮಾಡಿದ್ದಾರೆ ಎನ್ನಲಾಗಿದೆ. ನಗರದ ಸಿಟಿ ಸೆಂಟರ್ ಮಾಲ್ ಬಳಿಯ ಅಂಗಡಿಗಳನ್ನು, ಆಂಧ್ರ ಬ್ಯಾಂಕ್ನ್ನು ಹೋರಾಟಗಾರರು ಬಲವಂತವಾಗಿ ಬಂದ್ ಮಾಡಿಸಿದ್ದಾರೆ.
ಹಾಗೇ ಕಾರ್ಮಿಕ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸಿಎಎ, ಎನ್ಆರ್ಸಿ ಬಗ್ಗೆಯೂ ವಿರೋಧದ ಧ್ವನಿ ಕೇಳಿಬಂತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಪ್ರತಿಭಟನಾಕಾರರು ಪ್ರಧಾನಿ ಮೋದಿ ಹಾಗೂ ಅಮಿತ್ ಷಾ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ.( ದಿಗ್ವಿಜಯ ನ್ಯೂಸ್)