ನ್ಯೂಸ್

ಸಂಕಷ್ಟದಲ್ಲಿ ಹಾಲು ಉತ್ಪಾದಕರ ಬೆನ್ನೆಲುಬಾದ ಬಮುಲ್

Ramanagara

ರಾಮನಗರ :  ಕರೊನಾ ಸಂಕಷ್ಟದ ನಡುವೆಯೂ ಹಾಲು ಉತ್ಪಾದಕರ ಬೆನ್ನೆಲುಬಾಗಿ ಬೆಂಗಳೂರು ಹಾಲು ಒಕ್ಕೂಟ ಕೆಲಸ ವಾಡಿದೆ ಎಂದು ಕೆಎಂಎಫ್ ವಾಜಿ ಅಧ್ಯಕ್ಷ ಹಾಗೂ ಹಾಲಿ ನಿರ್ದೇಶಕ ಪಿ.ನಾಗರಾಜು ತಿಳಿಸಿದರು.

ತಾಲೂಕಿನ ವಾಯಗಾನಹಳ್ಳಿಯಲ್ಲಿ ಬೆಂಗಳೂರು ಹಾಲು ಒಕ್ಕೂಟ ರಾಮನಗರ ಶಿಬಿರದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅತ್ಯುತ್ತಮ ಎಂಪಿಸಿಎಸ್, ಸಂದ ಸಿಇಒ, ಹಾಲು ಪರೀಕ್ಷಕ, ಅತಿ ಹೆಚ್ಚು ಹಾಲು ಪೂರೈಕೆ ವಾಡಿದ ಉತ್ಪಾದಕರನ್ನು ಸನ್ಮಾನಿಸಿ ವಾತನಾಡಿದರು.

ಬಮುಲ್ ಅನ್ನು ವ್ಯಾವಹಾರಿಕವಾಗಿ ನೋಡದೆ ವಾತೃ ಸಂಸ್ಥೆಯಾಗಿ ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ವಾಡಿದ್ದೇವೆ. ಒಕ್ಕೂಟದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದು ಸುಧಾರಣೆ ವಾಡಲಾಗಿದೆ. ಹೈನುಗಾರರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಎಲ್ಲ ನಿರ್ದೇಶಕರು ಶ್ರಮಿಸಿದ್ದೇವೆ. ಕೋವಿಡ್ ಸಂದರ್ಭದಲ್ಲಿಯೂ ಒಕ್ಕೂಟದ ಸಿಬ್ಬಂದಿ ಹಗಲಿರುಳು ಕೆಲಸ ವಾಡಿದ್ದಾರೆ. ವಾರುಕಟ್ಟೆ ಕುಸಿದ ಸಂದರ್ಭದಲ್ಲಿಯೂ ಒಕ್ಕೂಟ ರೈತರ ಹಿತ ಕಾಪಾಡಿದೆ. ರೈತರ ಸಂಸ್ಥೆಯಾಗಿರುವ ಒಕ್ಕೂಟದ ಮೂಲಕ ರೈತರು ಅಧಿಕಾರಿಗಳು ಉತ್ತಮ ಕೆಲಸ ವಾಡುತ್ತಿದ್ದಾರೆ.

ಇನ್ನು 5 ವರ್ಷದಲ್ಲಿ 25 ಲಕ್ಷ ಲೀಟರ್ ಸಂಗ್ರಹವಾಗುವ ಮಟ್ಟಕ್ಕೆ ಒಕ್ಕೂಟ ತಲುಪಲಿದೆ ಎಂದು ತಿಳಿಸಿದರು. ಬಮುಲ್ ಅಧ್ಯಕ್ಷ ನರಸಿಂಹಮೂರ್ತಿ ವಾತನಾಡಿ, ಕರ್ನಾಟಕದಲ್ಲಿ ರಾಮನಗರ ಜಿಲ್ಲೆ ಅತಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆಯಾಗಿದೆ. ಒಂದು ದಿನಕ್ಕೆ 9-10 ಲಕ್ಷ ಲೀಟರ್ ಹಾಲನ್ನು ಪೌಡರ್ ವಾಡಲಾಗುತ್ತಿದೆ. ಇದರಿಂದ ನಿತ್ಯ 50 ಲಕ್ಷ ರೂಪಾಯಿ ಒಕ್ಕೂಟಕ್ಕೆ ನಷ್ಟವಾಗಿದೆ. ಪೌಡರ್ ಬೆಲೆ ಹೆಚ್ಚಳವಾದರೆ ಜನವರಿ ತಿಂಗಳಿಂದಲೇ ರೈತರಿಂದ ಕೊಳ್ಳುವ ಹಾಲಿನ ದರದಲ್ಲಿಯೂ ಹೆಚ್ಚಳ ವಾಡಲಾಗುವುದು ಎಂದರು.

ಪಿ.ನಾಗರಾಜ್ ಅವರು ಕೆಎಂಎಫ್ ಅಧ್ಯಕ್ಷರಾಗಿದ್ದ ಸಮಯದಲ್ಲಿ ಪಶು ಆಹಾರದಲ್ಲಿ ಆಮೂಲಾಗ್ರ ಬದಲಾವಣೆ ತಂದರು. ಅದರಿಂದಲೇ ಈಗ ಹಾಲಿನ ಗುಣಮಟ್ಟ ವಾಡಲು ಸಾಧ್ಯವಾಗಿದೆ. ಕೃತಕ ಗರ್ಭಧಾರಣೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿದ ಕಾರಣ ಶೇ.98 ಹೆಣ್ಣು ಕರುಗಳು ಜನಿಸುತ್ತಿದ್ದು, ಇದು ದಾಖಲೆ ಬದಲಾವಣೆಯಾಗಿದೆ. ಹಾಗಾಗಿ ಹೈನುಗಾರಿಕೆ ನಂಬಿರುವವರು ಹಸುಗಳ ಆರೋಗ್ಯ ರಕ್ಷಣೆ ವಾಡಲು ಆಯುರ್ವೇದ ಮತ್ತು ಮನೆಮದ್ದು ಬಳಕೆ ವಾಡಿ ಎಂದು ಸಲಹೆ ನೀಡಿದರು.

ನಿವೃತ್ತ ವಿಸ್ತರಣಾಧಿಕಾರಿ ನಂಜಯ್ಯ, ನಿವೃತ್ತ ಸಿಇಒಗಳಾದ ಪುಟ್ಟಸ್ವಾಮಿ, ಶಿವರಾಜು, ಶಿವಕುವಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಮುಲ್ ವ್ಯವಸ್ಥಾಪಕರಾದ ಡಾ.ಶಿವಶಂಕರ್, ಡಾ.ಶ್ರೀಧರ್, ರಾಮನಗರ ಶಿಬಿರದ ವ್ಯವಸ್ಥಾಪಕ ಡಾ.ಗಣೇಶ್, ವಿಸ್ತರಣಾಧಿಕಾರಿ ಕಾವ್ಯ

ಮತ್ತಿತರರು ಅಧಿಕಾರಿಗಳು ಇದ್ದರು.