ಜಾನಪದ ಪರಿಷತ್‌ನ ನೂತನ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ಭಜನಾ ಸ್ಪರ್ಧೆಯ ಆಹ್ವಾನ ಪತ್ರಿಕೆಯನ್ನು ಕೊಪ್ಪದಲ್ಲಿ ಬಿಡುಗಡೆಗೊಳಿಸಲಾಯಿತು. ಎಚ್.ಎಲ್.ದೀಪಕ್, ಓಣಿತೋಟ ರತ್ನಾಕರ್, ನಾರ್ವೆ ಆಶೋಕ್ ಇತರರಿದ್ದರು. 
ನ್ಯೂಸ್

20ಕ್ಕೆ ತಾಲೂಕು ಮಟ್ಟದ ಭಜನಾ ಸ್ಪರ್ಧೆ

ಜಿ. ಗಜೇಂದ್ರ

ಕೊಪ್ಪ: ಕನ್ನಡ ಜಾನಪದ ಪರಿಷತ್‌ನ ಕೊಪ್ಪ ತಾಲೂಕು ಮಹಿಳಾ ಘಟಕ ಹಾಗೂ ಕಸಬಾ ಹೋಬಳಿ ಘಟಕಗಳ ಪದಾಧಿಕಾರಿಗಳ ಪದಗ್ರಹಣ ಹಾಗೂ ತಾಲೂಕು ಮಟ್ಟದ ಭಜನಾ ಸ್ಪರ್ಧಾ ಕಾರ್ಯಕ್ರಮ ಜು. 20ರಂದು ಹಮ್ಮಿಕೊಳ್ಳಲಾಗಿದೆ ಪರಿಷತ್‌ನ ತಾಲೂಕು ಅಧ್ಯಕ್ಷ ಎಚ್.ಎಲ್.ದೀಪಕ್ ಹೇಳಿದರು. ನಾರ್ವೆಯ ಸ್ವಯಂಪ್ರಕಾಶ ಪ್ರೌಢಶಾಲೆಯ ಆವರಣದಲ್ಲಿ ಜು. 20ರ ಮಧ್ಯಾಹ್ನ 2 ಗಂಟೆಯಿಂದ ಭಜನಾ ಸ್ಪರ್ಧೆ, ನಂತರ ಪದಗ್ರಹಣ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಪರಿಷತ್‌ನ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್. ಬಾಲಾಜಿ, ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್, ಮಹಿಳಾ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷೆ ಎಂ.ಎಸ್.ವಿಶಾಲಾಕ್ಷಮ್ಮ ಭಾಗವಹಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀನಿಧಿ ದಿನೇಶ್, ಕಸಬಾ ಹೋಬಳಿ ಅಧ್ಯಕ್ಷರಾಗಿ ಪ್ರಶಾಂತ್ ಪದವಿ ಸ್ವೀಕಾರ ಮಾಡಲಿದ್ದಾರೆ ಎಂದರು. ಭಜನಾ ಸ್ಪರ್ಧೆ ಕಾರ್ಯಕ್ರಮದಲ್ಲಿ ಪ್ರಥಮ 5 ಸಾವಿರ ರೂ, ದ್ವಿತೀಯ 3 ಸಾವಿರ ರೂ, ತೃತೀಯ 2 ಸಾವಿರ ರೂ. ಬಹುಮಾನ ನೀಡಲಾಗುವುದು. ತಂಡದಲ್ಲಿ 8 ರಿಂದ 10 ಮಂದಿ ಭಾಗವಹಿಸಲು ಆವಕಾಶವಿರುತ್ತದೆ. ಮಾಹಿತಿಗೆ ಮೊ: 8277146941 ಸಂಪರ್ಕಿಸ ಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಓಣಿತೋಟ ರತ್ನಾಕರ್, ನಾರ್ವೆ ಅಶೋಕ್ ಇದ್ದರು.