ಶಿವಮೊಗ್ಗ: ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆಯು ಶ್ರೀ ಶನೈಶ್ಚರ ಸ್ವಾಮಿ ದೇವಸ್ಥಾನ ಸಮಿತಿ ಟ್ರಸ್ಟ್, ಭಜನಾ ಪರಿಷತ್, ಶಿವಮೊಗ್ಗ ನಗರದ ಎಲ್ಲ ಭಜನಾ ಮಂಡಳಿಗಳ ಒಕ್ಕೂಟದ ಸಹಕಾರದೊಂದಿಗೆ ಸೆ.27ರಿಂದ 29ರವರೆಗೆ ಸಂಜೆ 6ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಭಗವದ್ಗೀತೆಯ ವಿಶ್ವರೂಪ ದರ್ಶನ ದಿವ್ಯಸತ್ಸಂಗ, ಪ್ರವಚನ ಹಾಗೂ ಸಾಮೂಹಿಕ ಧ್ಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಭಜನಾ ಪರಿಷತ್ ಕಾರ್ಯದರ್ಶಿ ಶಬರೀಶ್ ಕಣ್ಣನ್ ಹೇಳಿದರು.
ಬೆಂಗಳೂರಿನ ಶ್ರೀಧರ ಶ್ರೀಗುಡ್ಡ ಹಾಗೂ ಆತ್ಮಸಂಶೋಧನಾ ಕೇಂದ್ರದ ಸಂಸ್ಥಾಪಕಿ ಗುರುಮಾತಾ ಅಮ್ಮ ಅವರು ಗೀತಾ ಸೂಕ್ಷ್ಮ ದರ್ಶನ, ನಿತ್ಯ ಜೀವನದಲ್ಲಿ ಗೀತಾನುಷ್ಠಾನದ ಬಗ್ಗೆ ಪ್ರವಚನ ನೀಡುವರು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27ರ ಸಂಜೆ 6ಕ್ಕೆ ಶ್ರೀ ಆದುಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಶ್ರೀ ಸಾಯಿನಾಥ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸುವರು. ಕೆಆರ್‌ಐಡಿಎಲ್ ಅಧ್ಯಕ್ಷ ಬಿ.ಕೆ.ಸಂಗಮೇಶ್ವರ್ ಅವರನ್ನು ಸನ್ಮಾನಿಸಲಾಗುವುದು. ಶ್ರೀಗಂಧ ಸಂಸ್ಥೆ ಅಧ್ಯಕ್ಷ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅಧ್ಯಕ್ಷತೆ ವಹಿಸುವರು ಎಂದರು.
ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪ್ರಮುಖರಾದ ಸುವರ್ಣಾ ಶಂಕರ್, ಇ.ವಿಶ್ವಾಸ್, ಎಸ್.ಜಿ.ಬಾಲು, ಮೋಹನ್‌ರಾವ್ ಜಾಧವ್, ಮಮತಾ ಪ್ರಸಾದ್, ಸುಧೀಂದ್ರ ಕಟ್ಟೆ, ನಾಗರಾಜ್, ರಾಜಣ್ಣ, ಮಾಲಾ ರಾಮಪ್ಪ, ಶಶಿಕಲಾ ಪ್ರಶಾಂತ್ ಸುದ್ದಿಗೋಷ್ಠಿಯಲ್ಲಿದ್ದರು.