ಭದ್ರಾವತಿ ಮಾಧವಚಾರ್‌ವೃತ್ತದಲ್ಲಿ ಹಿಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿದರು. ಹಾ.ರಾಮಪ್ಪ, ವಡಿವೇಲು, ಜಿ.ಧರ್ಮಪ್ರಸಾದ್, ಶಿವರಾಜ್ ಇತರರಿದ್ದರು. 
ನ್ಯೂಸ್

ಕೇಂದ್ರ ಸರ್ಕಾರ ಸಮಸ್ಯೆ ಬಗೆಹರಿಸಲಿ

ಭದ್ರಾವತಿ: ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಮೇಲಿನ ದೌರ್ಜನ್ಯ ಖಂಡಿಸಿ ಹಾಗೂ ಹಿಂದುಗಳ ಸುರಕ್ಷತೆಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಿಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ನಗರದ ಮಾಧವಾಚಾರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಬಾಂಗ್ಲಾ ಹಿಂದುಗಳ ಮೇಲೆ ದೌರ್ಜನ್ಯ ಪ್ರಕರಣಗಳು ಅವ್ಯಾಹತವಾಗಿ ನಡೆಯುತ್ತಿವೆ. ಅಲ್ಲದೆ ದೇವಾಲಯಗಳು, ಮನೆ, ಅಂಗಡಿಗಳನ್ನು ಧ್ವಂಸ ಮಾಡಿ ಹಿಂಸಿಸಲಾಗುತ್ತಿದೆ. ಕೇಂದ್ರ ಸರ್ಕಾರ ಮಧ್ಯೆ ಪ್ರವೇಶಿಸಿ ಅಲ್ಲಿನ ಹಿಂದುಗಳಿಗೆ ರಕ್ಷಣೆ ನೀಡಲು ಕ್ರಮ ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಅವರನ್ನು ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದು ಪರಿಷತ್ ಪ್ರಾಂತ್ಯ ಉಪಾಧ್ಯಕ್ಷ ಹಾ.ರಾಮಪ್ಪ, ಬಜರಂಗದಳದ ವಡಿವೇಲು, ಬಿಜೆಪಿ ಮಂಡಲ ಅಧ್ಯಕ್ಷ ಜಿ.ಧರ್ಮಪ್ರಸಾದ್, ಆರ್‌ಎಸ್‌ಎಸ್ ಪ್ರಮುಖರಾದ ಶಿವರಾಜ್, ಡಾ. ದತ್ತಾತ್ರೇಯ, ಮುಖಂಡರಾದ ಬಿ.ಕೆ.ಶ್ರೀನಾಥ್, ಕದಿರೇಶ್, ಮಂಜಣ್ಣ, ಚನ್ನೇಶ್, ರಾಮಲಿಂಗಯ್ಯ, ಅಣ್ಣಪ್ಪ, ನರಸಿಂಹಾಚಾರ್, ಕರಿಗೌಡ, ಕಾ.ರಾ.ನಾಗರಾಜ್, ಸರಸ್ವತಿ ಇತರರಿದ್ದರು.