ನ್ಯೂಸ್

ನೀಟ್- ಯುಜಿ ಪರೀಕ್ಷೆಗೆ ಸಂಬಂಧಿಸಿದಂತೆ ಈ ವದಂತಿ ನಂಬಬೇಡಿ: ಎನ್​ಟಿಎ

ನವದೆಹಲಿ: ಎನ್​ಇಇಟಿ -ಯುಜಿ ಪ್ರವೇಶ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಹೇಳುವ ನಕಲಿ ವಾಟ್ಸಾಪ್ ಸಂದೇಶವು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಅಭ್ಯರ್ಥಿಗಳು ಈ ಕುರಿತು ಜಾಗೃತರಾಗಿರಬೇಕೆಂದು ಪ್ರೆಸ್ ಎನ್​ಟಿಎ ಬುಧವಾರ ಹೇಳಿದೆ.

ಎನ್​ಟಿಎ ಈ ಕುರಿತು ಅಧಿಕೃತ ವೆಬ್​​ಸೈಟ್​ನಲ್ಲಿ ತಿಳಿಸಿದ್ದು, ಪರೀಕ್ಷೆಯನ್ನು ಮುಂದೂಡಲು ಅಂತಹ ಯಾವುದೇ ಸಲಹೆ ನೀಡಲಾಗಿಲ್ಲ. ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಮಾತ್ರ ಪರಿಶೀಲಿಸಬೇಕೆಂದು ತಿಳಿಸಿದೆ.

ಭಾರತದಾದ್ಯಂತ ವೈದ್ಯಕೀಯ ಮತ್ತು ಸಂಬಂಧಿತ ಕೋರ್ಸ್‌ಗಳಿಗೆ ಪದವಿ ಕೋರ್ಸ್ ಪ್ರವೇಶಕ್ಕಾಗಿ ನೀಟ್ ಅಥವಾ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು ನಡೆಸಲಾಗುತ್ತದೆ.