ನ್ಯೂಸ್

ಬ್ಯಾಂಕ್ ಖಾತೆ ವಿವರ, ಒಟಿಪಿ ಯಾರು ಕೇಳಿದ್ರೂ ಕೊಡ್ತೀರಾ?: ಇಲ್ಲೊಂದು ಎಚ್ಚರಿಕೆ ಇದೆ!

Mysuru Rural

ಬೆಂಗಳೂರು: ಲಾಕ್​ಡೌನ್ ಹಿನ್ನೆಲೆಯಲ್ಲಿ ಗ್ರಾಹಕರು ಬ್ಯಾಂಕ್​ಗಳಿಗೆ ಹೋಗಲು ಸಾಧ್ಯವಾಗದಿರುವುದನ್ನೇ ಬಳಸಿಕೊಳ್ಳುತ್ತಿರುವ ಸೈಬರ್ ಖದೀಮರು, ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ಹಣ ದೋಚಲು ಯತ್ನಿಸುತ್ತಿದ್ದಾರೆ. ಡೆಬಿಟ್, ಕ್ರೆಡಿಟ್ ಕಾರ್ಡ್ ಅವಧಿ ಮುಗಿಯುತ್ತಿದೆ. ಕ್ರೆಡಿಟ್ ಕಾರ್ಡ್ ವಹಿವಾಟು ಹೆಚ್ಚಿಸಬೇಕು. ಕೂಡಲೇ ಅಪ್​ಡೇಟ್ ಮಾಡಬೇಕು, ಇಲ್ಲವಾದರೆ ಕಾರ್ಡ್ ನಿಷ್ಕಿ›ಯವಾಗಲಿದೆ ಎಂದು ಹೇಳುತ್ತಾರೆ.

ಲಾಕ್​ಡೌನ್ ಇರುವುದರಿಂದ ಬ್ಯಾಂಕ್​ನಿಂದ ಕರೆ ಮಾಡುತ್ತಿರುವುದಾಗಿ ನಂಬಿಸುತ್ತಾರೆ. ಬಳಿಕ ಗ್ರಾಹಕರಿಂದ ಒಟಿಪಿ ಸಂಖ್ಯೆ ಪಡೆದು ಕೃತ್ಯ ಎಸಗುತ್ತಿದ್ದಾರೆ. ಫೋನ್ ನಂಬರ್ ಆನ್​ಲೈನ್ ಬ್ಯಾಂಕಿಂಗ್​ಗೆ ಲಿಂಕ್ ಆಗಿರುವುದನ್ನು ತಿಳಿದುಕೊಂಡಿರುತ್ತಾರೆ.

ಲಾಕ್​ಡೌನ್ ಹಿನ್ನೆಲೆಯಲ್ಲಿ ಇಎಂಐ ಪಾವತಿಗೆ ಆರ್​ಬಿಐ ವಿನಾಯಿತಿ ನೀಡಿದೆ. ಸಾಲದ ಕಂತು ಮುಂದೂಡುತ್ತೇವೆ ಎಂದು ಹೇಳಿ ಒಟಿಪಿ ಪಡೆದು ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುತ್ತಾರೆ. ಬ್ಯಾಂಕ್​ನಿಂದ ಯಾವುದೇ ಸಿಬ್ಬಂದಿ ಕರೆ ಮಾಡುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.