ನ್ಯೂಸ್

ಹಣಕ್ಕೆ ನಾಯಿ ಮರಿ ಮಾರಾಟಕ್ಕೂ ಮುನ್ನ ಎಚ್ಚರ; ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಎಫ್ ಐಆರ್ ಬೀಳಲಿದೆ

ಬೆಂಗಳೂರು: ಅನುಮತಿ ಇಲ್ಲದೆ ನಾಯಿ ಮರಿಗಳ ಮಾರಾಟ ಮಾಡಿದರೂ ಎಫ್ ಐಆರ್ ದಾಖಲಾಗಲಿದೆ.

25 ಸಾವಿರ ರೂ.ಗೆ ನಾಯಿ ಮರಿಯನ್ನು ಮಾರಾಟ ಮಾಡುತ್ತಿದ್ದ ಯುವಕ, ಯುವತಿ ವಿರುದ್ಧ ಕಬ್ಬನ್‌ಪಾರ್ಕ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಲಿದೆ.

ಈ ಸಂಬಂಧ ಬಿಬಿಎಂಪಿ ಅನಿಮಲ್ ವೆಲ್ ಫೇರ್ ವಾರ್ಡನ್ ತೇಜಸ್ವರ್, ದೂರು ಸಲ್ಲಿಸಿದ್ದಾರೆ.

ಆ. 5ರಂದು ಚರ್ಚ್ ಸ್ಟ್ರೀಟ್‌ನಲ್ಲಿ ಯುವಕ, ಯುವತಿ ನಾಯಿ ಮರಿಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣ ಸ್ಥಳಕ್ಕೆ ತೆರಳಿ ನಾಯಿ ಮರಿಯನ್ನು ರಕ್ಷಣೆ ಮಾಡಲಾಗಿದೆ. ಆರೋಪಿತರು ಪ್ರಾಣಿಗಳ ದೌರ್ಜನ್ಯ ತಡೆ ಕಾಯ್ದೆ 1960 ಉಲ್ಲಂಘನೆ ಮಾಡಿದ್ದಾರೆ.

ಯುವಕ, ಯುವತಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ದೂರಿನಲ್ಲಿ ಮನವಿ ಮಾಡಿದ್ದರು. ಕೋರ್ಟ್ ಅನುಮತಿ ಪಡೆದು ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.