ಕೋಲಾರ ಜಿಲ್ಲೆ ಮುಳಬಾಗಿಲು ನಗರದಲ್ಲಿ ಐಪಿಎಲ್​ ಬೆಟ್ಟಿಂಗ್​ ಆಡಿಸುತ್ತಿದ್ದ ಆರೋಪಿ ನಯಾಜ್​ನನ್ನು ಸಿಇಎನ್​ ಪೊಲೀಸರು ಬಂಧಿಸಿರುವುದು. 
ನ್ಯೂಸ್

ಬೆಟ್ಟಿಂಗ್​ ಆಡಿಸುತ್ತಿದ್ದವನ ಬಂಧನ

ಕಿರುವಾರ ಎಸ್.ಸುದರ್ಶನ್

ಕೋಲಾರ: ಐಪಿಎಲ್​ ಕ್ರಿಕೆಟ್​ ಬೆಟ್ಟಿಂಗ್​ ದಂಧೆ ನಡೆಸುತ್ತಿದ್ದ ಆರೋಪಿಯನ್ನು ಕೋಲಾರ ಜಿಲ್ಲಾ ಸಿಇಎನ್​ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮುಳಬಾಗಿಲು ನಗರದ ನಯಾಜ್​ ಬಂಧಿತ. ಖಚಿತ ಮಾಹಿತಿ ಮೇರೆಗೆ ಠಾಣೆಯ ಇನ್​ಸ್ಪೆಕ್ಟರ್​ ಎಸ್​.ಆರ್​.ಜಗದೀಶ್​ ನೇತೃತ್ವದಲ್ಲಿ ಸಿಬ್ಬಂದಿ ವಿನಯ್​, ಶಿವಾನಂದ, ಅರುಣ್​ಕುಮಾರ್​ ಕಾರ್ಯಾಚರಣೆ ನಡೆಸಿದ್ದಾರೆ. ಆನ್​ಲೈನ್​ ಕ್ರಿಕೆಟ್​ ಬೆಟ್ಟಿಂಗ್​ ಅಪ್ಲಿಕೇಶನ್​ಗಳ ಮೂಲಕ ಬೆಟ್ಟಿಂಗ್​ ದಂಧೆ ನಡೆಸಿ ಸಾರ್ವಜನಿಕರಿಂದ ನಗದು ಮತ್ತು ಯುಪಿಐ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದ. ದಂಧೆಗೆ ಬಳಕೆ ಮಾಡುತ್ತಿದ್ದ ಎರಡು ಮೊಬೈಲ್​ ವಶಕ್ಕೆ ಪಡೆದಿದ್ದು, ಆರೋಪಿಯ ಬ್ಯಾಂಕ್​ ಖಾತೆಯಲ್ಲಿದ್ದ 5.19 ಲಕ್ಷ ರೂ. ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಂಡದ ಕಾರ್ಯಕ್ಕೆ ಎಸ್ಪಿ ಬಿ.ನಿಖಿಲ್​, ಎಸ್ಪಿಗಳಾದ ರವಿ ಶಂಕರ್​, ಎಚ್​.ಸಿ.ಜಗದೀಶ್​ ಶ್ಲಾಘಿಸಿದ್ದಾರೆ.