ಸೊರಬ: ಮಳಲಗದ್ದೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 2023-24ನೇ ಸಾಲಿನ ತಾಲೂಕು ಉತ್ತಮ ಕೃಷಿ ಪತ್ತಿನ ಸಹಕಾರ ಸಂಘ ಪ್ರಶಸ್ತಿ ಲಭಿಸಿದೆ.
ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಅಪೆಕ್ಸ್ ಬ್ಯಾಂಕ್‌ನಿಂದ ಪ್ರಶಸ್ತಿ ನೀಡಲಾಗುತ್ತದೆ. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಆರ್.ಎಂ.ಮಂಜುನಾಥ ಗೌಡ ಅಧ್ಯಕ್ಷತೆಯಲ್ಲಿ ಏರ್ಪಡಿಸಿದ್ದ ವಾರ್ಷಿಕ ಸಭೆಯಲ್ಲಿ ಪ್ರಶಸ್ತಿ ನೀಡಲಾಯಿತು.
ಮಳಲಗದ್ದೆ ಸಹಕಾರ ಸಂಘದ ಅಧ್ಯಕ್ಷ ಎಂ.ಆರ್.ಅಶೋಕ ಹೆಗಡೆ ಮತ್ತು ಕಾರ್ಯದರ್ಶಿ ಎಚ್.ಎಂ.ವಿನಯ್ ಅವರನ್ನು ಗೌರವಿಸಲಾಯಿತು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ನಿದೇರ್ಶಕರಾದ ಗೋಪಾಲಕೃಷ್ಣ ಬೇಳೂರು, ಬಸವಾನಿ ವಿಜಯದೇವ್, ಕೆ.ಪಿ.ದುಗ್ಗಪ್ಪಗೌಡ, ಎಂ.ಎ.ಪರಮೇಶ್, ಜಿ.ಎಸ್.ಸುಧೀರ್, ಕೆ.ಪಿ.ರುದ್ರಗೌಡ, ಮಂಜಪ್ಪ, ಶಿವಶಂಕರಪ್ಪ, ಮಹಾಲಿಂಗಯ್ಯ ಶಾಸ್ತ್ರಿ, ನಾಗಭೂಷಣ, ಅನ್ನಪೂರ್ಣ, ಜಿಲ್ಲಾ ಹಾಪ್ಸ್‌ಕಾಮ್ ಅಧ್ಯಕ್ಷ ಕೆ.ವಿ.ಗೌಡ ಇತರರಿದ್ದರು.