ನ್ಯೂಸ್

ಬೆಸ್ಕಾಂ ಕಾಮಗಾರಿಗೆ ವಿದ್ಯುತ್ ಕಟ್; ಇಂದು ಎಲ್ಲೆಲ್ಲಿ ವಿದ್ಯುತ್ ಇರಲ್ಲ?

ಬೆಂಗಳೂರು: ಇಂದು (ಜೂ.28) ಬೆಸ್ಕಾಂ, ಕಾಮಗಾರಿ ನಡೆಸುತ್ತಿರುವ ಕಾರಣ ಸಿಲಿಕಾನ್ ಸಿಟಿಯ ಕೆಲ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಿಲಿಕಾನ್ ಸಿಟಿ ಜನತೆಗೆ ಇಂದು ಪವರ್ ಕಟ್, ಶಾಕ್ ನೀಡಲಿದ್ದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ವಿದ್ಯುತ್ ಕಡಿತಗೊಳಿಸಲಾಗುತ್ತಿದೆ. ಒಟ್ಟು ಸಿಲಿಕಾನ್ ಸಿಟಿಯ ಜನರು ಇಂದು ಕನಿಷ್ಠ ಐದು ಗಂಟೆಗಳ ಕಾಲ ವಿದ್ಯುತ್ ವ್ಯತ್ಯಯವನ್ನು ಅನುಭವಿಸಲಿದ್ದಾರೆ.

ಎಲ್ಲೆಲ್ಲಿ ಪವರ್ ಕಟ್?

  1. ವಿಶ್ವಪ್ರಿಯ ಲೇಔಟ್
  2. ಬೇಗೂರು ಕೊಪ್ಪ ರಸ್ತೆ
  3. ದೇವರಚಿಕ್ಕನಹಳ್ಳಿ
  4. ಅಕ್ಷಯನಗರ
  5. ಪ್ರೆಸ್ಟೀಜ್ ಸಾಂಗ್ ಆಫ್ ಸೌತ್
  6. ತೇಜಸ್ವಿನಿ ನಗರ
  7. ಹಿರಾನಂದನಿ ಅಪಾರ್ಟ್‌ಮೆಂಟ್
  8. ಎಲಿಟಾ ಪ್ರೊಮೆನೇಡ್ ಅಪಾರ್ಟ್‌ಮೆಂಟ್‌ಗಳು
  9. ಕೆಆರ್ ಲೇಔಟ್
  10. ಶಾರದ ನಗರ
  11. ಚುಂಚುಘಟ್ಟ ಮತ್ತು ಉಪ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳು, ಮತ್ತು ಸುತ್ತಮುತ್ತಲಿನ ಪ್ರದೇಶಗಳು
  12. ಕುನ್ನೂರು
  13. ಹುಕುಂದ
  14. ಕೋಡಿಹಳ್ಳಿ
  15. ಬಿಜ್ಜಹಳ್ಳಿ
  16. ಹುಣಸೇನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳು

ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ