ರಾಮನಗರ: ಇದೀಗ ಆಗಸ್ಟ್ ತಿಂಗಳಿನಿಂದ ವಿದ್ಯುತ್ ಬಿಲ್ ಉಚಿತ ಯೋಜನೆ ಜಾರಿಗೆ ಬರಲಿದ್ದು ಕರೆಂಟ್ ಬಿಲ್ ಕೊಡಲು ಹೋದ ಲೈನ್ ಮೆನ್ ಮೇಲೆ ಹಲ್ಲೆ ನಡೆಸಲಾಗಿದೆ.
ಈ ಘಟನೆ ರಾಮನಗರದ ಟಿಪ್ಪು ನಗರದಲ್ಲಿ ನಡೆದಿದ್ದು ರಫೀಕ್, ಚಿನ್ಮಯ್ ಎಂಬ ಲೈನ್ಮೆನ್ಗಳ ಮೇಲೆ ಮುಸ್ಲಿಂ ಯುವಕ ಹಲ್ಲೆ ನಡೆಸಿದ್ದಾನೆ.
ಕರೆಂಟ್ ಬಿಲ್ ಕೊಡುತ್ತಿದ್ದಂತೆ ಬಿಲ್ ಜಾಸ್ತಿ ಬಂದಿದೆ ಎಂದು ಕ್ಯಾತೆ ತೆಗೆದ ಯುವಕ, ಬೆಸ್ಕಾಂ ಸಿಬ್ಬಂದಿಗಳಿಗೆ ಧಮ್ಕಿ ಹಾಕಿದ್ದಾನೆ. ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಏಕಾಏಕಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.