ನ್ಯೂಸ್

ನಗರದಲ್ಲಿ ಬಿದ್ದ ಮಳೆ ಪರಿಣಾಮ; 458 ವಿದ್ಯುತ್ ಕಂಬಗಳು ಹಾನಿ

Bengaluru - Political - Shivananda Tagadur

ಬೆಂಗಳೂರು:
ನಗರದಲ್ಲಿ ಬಿದ್ದ ಮಳೆಯ ಪರಿಣಾಮವಾಗಿ ಬಿಬಿಎಂಪಿ ವ್ಯಾಪ್ತಿಯ 458 ವಿದ್ಯುತ್ ಕಂಬಗಳು ಮರಿದಿವೆ. 86 ಟ್ರಾನ್‌ಸ್ಾರ‌್ಮರ್‌ಗಳು ಹಾನಿಗೊಳಗಾಗಿವೆ.
ಜೂ.1ರಂದು 85 ವಿದ್ಯುತ್ ಕಂಬಗಳು, 18 ಟ್ರಾನ್‌ಸ್ಾರ‌್ಮರ್‌ಗಳು ಹಾನಿಗೊಳಗಾಗಿದ್ದವು. ಭಾನುವಾರ ಬಿದ್ದ ಮಳೆಗೆ ಅತಿ ಹೆಚ್ಚು 373 ವಿದ್ಯುತ್ ಕಂಬ, 68 ಟ್ರಾನ್‌ಸ್ಾರ‌್ಮರ್‌ಗಳು, 14 ಡಿಪಿ ಸ್ಟ್ರಕ್ಚರ್‌ಗಳು ಹಾನಿಯಾಗಿವೆ ಎಂದು ಬೆಸ್ಕಾಂ ತಿಳಿಸಿದೆ.
ಬೆಂಗಳೂರು ದಕ್ಷಿಣ ವಿಭಾಗದಲ್ಲಿ ಅತಿ ಹೆಚ್ಚು 211 ಕಂಬಗಳು, ಬೆಂಗಳೂರು ಉತ್ತರದಲ್ಲಿ ಅತಿ ಕಡಿಮೆ 40 ಕಂಬಗಳು ಹಾನಿಯಾಗಿವೆ. ಬೆಂಗಳೂರು ದಕ್ಷಿಣದಲ್ಲಿ 16 ಟ್ರಾನ್‌ಸ್ಾರ‌್ಮರ್, ಉತ್ತರದಲ್ಲಿ 4 ಟ್ರಾನ್‌ಸ್ಾರ‌್ಮರ್ ಹಾಳಾಗಿವೆ.
ಕಳೆದ ವರ್ಷ ಇದೇ ಅವಧಿಯ ಹೊತ್ತಿಗೆ 12304 ಕಂಬಗಳು ಹಾನಿಗೊಳಗಾಗಿದ್ದರೆ, ಈ ಬಾರಿ 5829 ಕಂಬಗಳು ಹಾನಿಯಾಗಿವೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.