ಬೇರುಗಂಡಿ ಬೃಹನ್ಮಠಕ್ಕೆ ಭೇಟಿ ನೀಡಿದ ಯೋಗ ತಜ್ಞ ಡಾ. ಬಸವರಾಜ್ ಹಡಗಲಿ ಅವರನ್ನು ಶ್ರೀ ಮಹಾಂತ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು. ಜ್ಯೋತಿಷಿ ಎಚ್.ಕೆ.ಬಾಲಾಜಿ ದಂಪತಿ, ಲೆಕ್ಕ ಪರಿಶೋಧಕ ಯುವರಾಜ್ ಮತ್ತಿತರರಿದ್ದರು.  
ನ್ಯೂಸ್

ಬೇರುಗಂಡಿ ಬೃಹನ್ಮಠಕ್ಕೆ ಬಸವರಾಜ್ ಹಡಗಲಿ ಭೇಟಿ

ಆಲ್ದೂರು: ಸಮೀಪದ ಮಾಚಗೊಂಡನಹಳ್ಳಿ ಶ್ರೀ ಬೇರುಗಂಡಿ ಬೃಹನ್ಮಠಕ್ಕೆ ಮಂಗಳವಾರ ಬಾಗಲಕೋಟೆ ಜಿಲ್ಲೆ ಕೃಷ್ಣ ಯೋಗಾನಂದಾಶ್ರಮದ ಯೋಗ ತಜ್ಞ ಡಾ. ಬಸವರಾಜ್ ಹಡಗಲಿ ಭೇಟಿ ನೀಡಿ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಡಾ. ಬಸವರಾಜ್ ಹಡಗಲಿ ಅವರು ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಕೃಷ್ಣ ಯೋಗಾನಂದಾಶ್ರಮ ಎಂಬ ಯೋಗ ತರಬೇತಿ ಕೇಂದ್ರ ನಡೆಸುತ್ತಿದ್ದು ದೇಶ, ವಿದೇಶಗಳ ಸಾವಿರಾರು ಶಿಷ್ಯವೃಂದವನ್ನು ಹೊಂದಿದ್ದಾರೆ. ಕಾಶಿ ಪೀಠದ ಜಗದ್ಗುರು ಸೇರಿ ಹಲವು ಶಿವಾಚಾರ್ಯರಿಗೆ ಯೋಗ ತರಬೇತಿ ನೀಡಿದ್ದಾರೆ.
ಮಂಗಳವಾರ ಬೇರುಗಂಡಿ ಬೃಹನ್ಮಠಕ್ಕೆ ಭೇಟಿ ನೀಡಿ ಸಿದ್ದೇಶ್ವರ ಸ್ವಾಮಿ ಗದ್ದುಗೆಯ ದರ್ಶನ ಪಡೆದರು. ಶ್ರೀಮಠದಿಂದ ದಂಪತಿಯನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮೈಸೂರಿನ ಜ್ಯೋತಿಷಿ ಎಚ್.ಕೆ.ಬಾಲಾಜಿ ದಂಪತಿ, ಆಶಾಕಿರಣ ಅಂಧ ಮಕ್ಕಳ ಶಾಲೆಯ ಸಂಸ್ಥಾಪಕ ಜೆ.ಪಿ.ಕೃಷ್ಣೇಗೌಡ, ಲೆಕ್ಕಪರಿಶೋಧಕರಾದ ಯುವರಾಜ್, ಶಿವಮೂರ್ತಿ ಮತ್ತಿತರರಿದ್ದರು.