ನ್ಯೂಸ್

ಬೇಂಗ್ರೆ ಹಳೇ ದ್ವೇಷದ ಹಿನ್ನೆಲೆ ತಡೆದು ನಿಲ್ಲಿಸಿ ಯುವಕನಿಗೆ ಚೂರಿ ಇರಿತ

ಮಂಗಳೂರು: ಬೇಂಗ್ರೆಯಲ್ಲಿ ಸೋಮವಾರ ರಾತ್ರಿ ಮೆಡಿಕಲ್ ಶಾಪ್‌ಗೆ ನಡೆದುಕೊಂಡು ಹೋಗುತ್ತಿದ್ದಾಗ ತಂಡವೊಂದು ತಡೆದು ನಿಲ್ಲಿಸಿ, ಚೂರಿಯಿಂದ ಇರಿದು ಗಾಯಗೊಳಿಸಿದೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಮೊಹಮ್ಮದ್ ಅಕ್ರಂ ಗಾಯಾಳು. ಸಮದ್, ಇಜಾಝ್ ಮತ್ತು ಇರ್ಫಾನ್ ಆರೋಪಿಗಳು. ಹಲ್ಲೆ ಮಾಡುತ್ತಿದ್ದಾಗ ನೋವಿನಿಂದ ಬೊಬ್ಬೆ ಹೊಡೆದಾಗ ಸ್ಥಳೀಯರು ಆಗಮಿಸಿದ್ದಾರೆ. ಈ ಸಂದರ್ಭ ಆರೋಪಿಗಳು ಪರಾರಿಯಾಗಿದ್ದಾರೆ. ಹಳೇ ದ್ವೇಷದಿಂದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.