ನ್ಯೂಸ್

ಸಿಲಿಕಾನ್​​​​ ಸಿಟಿಯ ಟ್ರಾಫಿಕ್​​ನಲ್ಲಿ ಸಿಲುಕಿಕೊಂಡವರಿಗೊಂದು ಡೇಟಿಂಗ್​​​ ಟಿಪ್​; ಮಹಿಳೆಯ ಎಕ್ಸ್​​​​​​​(ಟ್ವಿಟ್ಟರ್​) ಪೋಸ್ಟ್​​​ ವೈರಲ್​..!

ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್​​​ ಕಿರಿಕಿರಿ ಬಗ್ಗೆ ಹೊಸದಾಗಿ ಹೇಳೋದೇನೂ ಇಲ್ಲ. ಎಂದೂ ಮುಗಿಯದ ಟ್ರಾಫಿಕ್ ದಟ್ಟಣೆಗೆ ಬೆಂಗಳೂರು ತುಂಬಾನೇ ಫೇಮಸ್​​​. ಇನ್ನು ಟ್ರಾಫಿಕ್​​ ಜಾಮ್​​ನಲ್ಲಿ ಡ್ಯಾನ್ಸ್​​ ಮಾಡಿದ ವಿಡಿಯೋ, ಟ್ರಾಫಿಕ್​ನಲ್ಲಿ ಸಿಲುಕಿಕೊಂಡ ಮಹಿಳೆ ಬಟಾಣಿ ಸಿಪ್ಪೆಯನ್ನ ಸುಲಿದ ಫೋಟೋ ಎಲ್ಲವೂ ವೈರಲ್​ ಆಗಿತ್ತು. ಇದೀಗ ಮತ್ತೊಂದು ಟ್ವೀಟ್​​ ವೈರಲ್​ ಆಗಿದೆ.


ಬೆಂಗಳೂರಿನ ನಿವಾಸಿ ಪ್ರಕೃತಿ ಶರ್ಮಾ ಟ್ರಾಫಿಕ್​ನಲ್ಲಿ ಪ್ರತಿನಿತ್ಯ ಸಿಲುಕಿಕೊಳ್ಳುವ ಯುವಕ ಯುವತಿಯರಿಗೆ ಡೇಟಿಂಗ್​​ ಟಿಪ್​​ ನೀಡಿದ್ದಾರೆ. ಈಕೆ ಎಕ್ಸ್ (ಟ್ವಿಟ್ಟರ್​​​​​)ನಲ್ಲಿ ಹಂಚಿಕೊಂಡ ಪೋಸ್ಟ್​​​ ಒಂದರಲ್ಲಿ ಈ ಬಗ್ಗೆ ಬರೆದಿದ್ದು, ಅದ್ಭುತ ಡೇಟಿಂಗ್ ಸಲಹೆಯೊಂದನ್ನ ನೀಡಿದ್ದಾರೆ.


ಏನದು ಡೇಟಿಂಗ್​​ ಸಲಹೆ?
ಪ್ರಕೃತಿ ಶರ್ಮಾ ಮಾಡಿದ ಪೋಸ್ಟ್​​​ನಲ್ಲಿ ಏನಿದೆ ಅನ್ನೋದಾದ್ರೆ ನೀವು ನಿಮ್ಮ ನಾಳಿನ ಪ್ಲ್ಯಾನ್​​ಗಳನ್ನ ಮೊದಲೇ ಮಾಡಿಕೊಳ್ಳಿ. ನೀವು ಮತ್ತು ನಿಮ್ಮ ಸಂಗಾತಿ ಟ್ರಾಫಿಕ್​​ನಲ್ಲಿ ತುಂಬಾ ಹೊತ್ತು ಸಿಲುಕಿಕೊಳ್ತೀರಿ ಅನ್ನೋದಾದ್ರೆ ಒಟ್ಟಿಗೆ ಪ್ರಯಾಣ ಬೆಳೆಸಿ. ಯಾಕಂದ್ರೆ ಟ್ರಾಫಿಕ್​​​​ನಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಾಗ ನೀವು ಒಂದಷ್ಟು ಮಾತುಕತೆ ನಡೆಸಬಹುದು. ಜತೆಗೆ ಮತ್ತಷ್ಟು ಹತ್ತಿರವಾಗಬಹುದು. ನಿಮ್ಮ ಸಂಗಾತಿ ಕೋಪಗೊಂಡಿದ್ದಾಗ ಅದನ್ನು ಪರಿಹರಿಸಿಕೊಳ್ಳಲು ಇದೊಂದುಇ ಉತ್ತಮ ಅವಕಾಶವೆಂದು ಅದರಲ್ಲಿ ಉಲ್ಲೇಖಿಸಲಾಗಿದೆ.


ನೆಟ್ಟಿಗರ ಕಾಮೆಂಟ್​​ ಮತ್ತು ಟ್ರೋಲ್​:
ಮಹಿಳೆ ಮಾಡಿರುವ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಇದಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಕಾಮೆಂಟ್​​ ಮಾಡಿದ್ದಾರೆ. ಓರ್ವ ಬಳಕೆದಾರರು, ಮಹಿಳೆಯರನ್ನು ಸಂಬಾಳಿಸೋದು ದೊಡ್ಡ ತಲೆ ನೋವು. ಹಾಗಾಗಿ ಟ್ರಾಫಿಕ್​ ಕಿರಿಕಿರಿಯ ಮಧ್ಯೆ ಇದೂ ದೊಡ್ಡ ತಲೆನೋವೇ ಅನ್ನಿಸುತ್ತೆ ಎಂದಿದ್ದಾರೆ.
ಈ ರೀತಿಯಾಗಿ ಡೇಟಿಂಗ್​​​​ ಸಲಹೆ ಕೊಟ್ರೆ ಕಾರ್​​ಪೂಲಿಂಗ್​​ ಅಪ್ಲಿಕೇಶನ್‌ಗಳು​​(ಓಲಾ, ಊಬರ್​​) ಡೇಟಿಂಗ್​​ ಅಪ್ಲಿಕೇಶನ್‌ಗಳಷ್ಟೆ ದ್ವಿಗುಣಗೊಳ್ಳಲಿದೆ ಎಂದು ಮತ್ತೊಬ್ಬ ವ್ಯಕ್ತಿ ಕಾಮೆಂಟ್​​ ಮಾಡಿದ್ದಾರೆ.


ಸದ್ಯ ಈ ಪೋಸ್ಟ್​​ ಸಾಮಾಜಿಕ ಜಾಲತಾಣದಲ್ಲಿ ನಾನಾ ಕಾಮೆಂಟ್​ಗಳನ್ನ ಪಡೆದುಕೊಳ್ಳುತ್ತಿದ್ದು, ನಾನಾ ಅಭಿಪ್ರಾಯ ವ್ಯಕ್ರತ ಪಡಿಸುತ್ತಿದ್ದಾರೆ.