ಬೆಂಗಳೂರು: ನಾನಂತೂ ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ. ನಾನು ಬೆಂಗಳೂರು ನಗರದವರು, ನಾವು ಏನೂ ಕೇಳಲ್ಲ. ಬೆಂಗಳೂರು ನಗರಾಭಿವೃದ್ಧಿ ಖಾತೆ ಬೆಂಗಳೂರಿನವರಿಗೆ ಕೊಟ್ಟರೆ ಒಳ್ಳೆಯದು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು ಹಿಂದೆ ಬಿಜೆಪಿಯವರೂ ಬೆಂಗಳೂರಿನ ಶಾಸಕರಿಗೆ ಆ ಖಾತೆ ಕೊಟ್ಟಿರಲಿಲ್ಲ. ಈಗಲಾದರೂ ಬೆಂಗಳೂರಿನವರಿಗೇ ಕೊಟ್ಟರೆ ಒಳ್ಳೆಯದು ಎಂದರು.
ಪಕ್ಷದ ವಿಚಾರದಲ್ಲಿ ಏನೇ ಇದ್ದರೂ ನಾಲ್ಕು ಗೋಡೆಗಳ ಮಧ್ಯೆ ಹೇಳಬೇಕು. ಏನಾದರೂ ಇದ್ದರೆ ಸುರ್ಜೆವಾಲಾಗೆ ಹೇಳಲಿ ಎಂದು ಪ್ರತಿಕ್ರಿಯಿಸಿದರು.
ಪ್ರತಿಪಕ್ಷದ ವಿರುದ್ಧ ಟೀಕಾ ಪ್ರಹಾರ ನಡೆಸಿದ ಅವರು, ವಿರೋಧ ಪಕ್ಷದ ನಾಯಕರು ಏನಾದರೂ ಹೇಳಬೇಕು ಎಂದು ಹೇಳುತ್ತಾರೆ. ರಮೇಶ್ ಜಾರಕಿಹೊಳಿ ವಿಜಯೇಂದ್ರನ ಇಳಿಸಿ ಅಂದಿದ್ದಾರೆ. ನಿಮ್ಮದು ನೀವು ತೊಳೆದುಕೊಳ್ಳಿ, ಬೇರೆಯವರದು ಯಾಕೆ ತೊಳಿತಿರಾ? ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಹೇಳಿದರು.