ಅಕ್ಟೋಬರ್ 1ರಿಂದ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್
ಬೆಂಗಳೂರು: ಕರ್ನಾಟಕದ ಕಬಡ್ಡಿ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿರುವ ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (Karnataka Kabaddi Premier League) ಅಕ್ಟೋಬರ್ 1ರಿಂದ 8ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
5N Sports Pvt. Ltd. ವತಿಯಿಂದ ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ KKPL, ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯುತ್ತಿರುವ ಫ್ರಾಂಚೈಸಿ ಆಧಾರಿತ ಕಬಡ್ಡಿ ಲೀಗ್ ಆಗಿದೆ.
ಬೆಂಗಳೂರಿನಲ್ಲಿ ಈಗಾಗಲೇ ನಡೆದ ಆಟಗಾರರ ಹರಾಜು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳ ಪ್ರತಿಭಾವಂತ ಆಟಗಾರರು 8 ಫ್ರಾಂಚೈಸಿ ತಂಡಗಳಿಗೆ ಸೇರ್ಪಡೆಯಾಗಿದ್ದಾರೆ. KKPLನಲ್ಲಿ ಕರ್ನಾಟಕದ ಆಟಗಾರರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಉತ್ತಮ ಮೊತ್ತದಲ್ಲಿ ಹರಾಜು ನಡೆದಿರುವುದು ವಿಶೇಷವಾಗಿದೆ.
ಬೆಂಗಳೂರು ಬೈಸನ್ಸ್ | ಮಂಗಳೂರು ಇಂಡಿಯನ್ಸ್ | ಮೈಸೂರು ಮಹಾಸೇನೆ | ಬೆಳಗಾವಿ ಬುಲ್ಸ್ | ಹೋಯ್ಸಳ ಎಂಪೈರ್ ಹಾಸನ | ಚಾಲುಕ್ಯ ಸೇನೆ ಬಾಗಲಕೋಟೆ | ಉತ್ತರ ಕನ್ನಡ ಸ್ಟಾಲಿಯನ್ಸ್ | ವಿಜಯಪುರ ಲಯನ್ಸ್
ಈ 8 ತಂಡಗಳು KKPL ಚಾಂಪಿಯನ್ಶಿಪ್ ಟ್ರೋಫಿಗಾಗಿ ಕಣಕ್ಕಿಳಿಯಲಿವೆ. ಮೊದಲ 7 ದಿನಗಳು ಲೀಗ್ ಹಂತದ ಪಂದ್ಯಗಳು ನಡೆಯಲಿದ್ದು, 8ನೇ ದಿನ ಪ್ಲೇಆಫ್ ಹಾಗೂ ಫೈನಲ್ ನಡೆಯಲಿದೆ.
ಪಂದ್ಯಗಳು ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ನಡೆಯಲಿದ್ದು, 5 ವಿವಿಧ ಭಾಷೆಗಳಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ರಾಜ್ಯದಾದ್ಯಂತ ಕಬಡ್ಡಿ ಅಭಿಮಾನಿಗಳನ್ನು ತಲುಪಲಿವೆ.
ಕರ್ನಾಟಕದ ಆಟಗಾರರಿಗೆ ವೇದಿಕೆ – ಕಬಡ್ಡಿಗೆ ಹೊಸ ದಿಕ್ಕು
ದಿನಾಂಕ: 1–8 ಅಕ್ಟೋಬರ್ 2026
ಸ್ಥಳ: ಕೋರಮಂಗಲ ಒಳಾಂಗಣ ಕ್ರೀಡಾಂಗಣ, ಬೆಂಗಳೂರು
ಸಮಯ: ಸಂಜೆ 6:00 – ರಾತ್ರಿ 10:00