ಸಂತ್ರಸ್ತ ಯುವತಿಯ ಎಕ್ಸ್​ ಪೋಸ್ಟ್ 
ನ್ಯೂಸ್

ಹೆಲ್ಮೆಟ್ ಪಡೆಯುವ ನೆಪದಲ್ಲಿ ಕೈ ಸವರಿ, ನಂಬರ್ ಕೇಳಿದ ರ‍್ಯಾಪಿಡೋ​ ರೈಡರ್; ಯುವತಿಯ X​ ಪೋಸ್ಟ್ ವೈರಲ್..Bengaluru

  • ಹೆಲ್ಮೆಟ್ ತೆಗೆದುಕೊಳ್ಳುವ ನೆಪದಲ್ಲಿ ಕೈ ಸವರಿ, ಪೋನ್ ನಂಬರ್ ಕೇಳಿ ರ‍್ಯಾಪಿಡೋ ಬೈಕ್​ ರೈಡರ್.​

  • ಲೈಂಗಿಕ ಕಿರುಕುಳದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಯುವತಿಯ ಪೋಸ್ಟ್.

  • ಪುಲಕೇಶಿನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿರೋ ಘಟನೆ ತಡವಾಗಿ ಬೆಳಕಿಗೆ.

ಬೆಂಗಳೂರು: ಇತ್ತೀಚೆಗೆ ಸಿಲಿಕಾನ್​ ಸಿಟಿಯಲ್ಲಿ ಕ್ಯಾಬ್​, ಬೈಕ್​ ಬುಕ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚೇ ಇದೆ. ಬಸ್​​ ಲಭ್ಯವಿಲ್ಲದ ಸಮಯದಲ್ಲಿ ಹಗಲು ರಾತ್ರಿ ಎನ್ನದೇ ಉಬರ್ ಹಾಗೂ ರ್ಯಾಪಿಡೋದಲ್ಲಿ ಪ್ರಯಾಣಿಸುವುದನ್ನು ಜನರು ನೆಚ್ಚಿಕೊಂಡಿದ್ದಾರೆ. ಆದರೆ, ಈ ಮಧ್ಯೆ ಹೆಣ್ಣು ಮಕ್ಕಳ ಸುರಕ್ಷತೆಗೆ ಧಕ್ಕೆ ತರುವಂತಹ ವಿಚಾರವೊಂದು ಪುಲಕೇಶಿನಗರದಲ್ಲಿ ಬೆಳಕಿಗೆ ಬಂದಿದೆ.

ಸೈಯದ್​ ಎಂಬ ರ‍್ಯಾಪಿಡೋ ಚಾಲಕನೊಬ್ಬ ಯುವತಿಯೊಬ್ಬಳಿಗೆ ಹೆಲ್ಮೆಟ್ ಕೊಡುವ ನೆಪದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿದೆ. ಆ ಮೂಲಕ ರಾತ್ರಿ ಅಥವಾ ಯಾವುದೇ ಸಮಯದಲ್ಲಿ ಕ್ಯಾಬ್​, ಬೈಕ್​ನಲ್ಲಿ ಪ್ರಯಾಣಿಸುವ ಯುವತಿಯರು ಎಚ್ಚರಿಕೆಯಿಂದಿರಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡು ಸಲಹೆ ನೀಡಿದ್ದಾರೆ.

ಏನಾಗಿತ್ತು?

ವರದಿಗಳ ಪ್ರಕಾರ, ಯುವತಿಯೊಬ್ಬರು ಮೂರು ದಿನದ ಹಿಂದೆ ಪುಲಕೇಶಿನಗರದಲ್ಲಿನ ತಮ್ಮ ನಿವಾಸಕ್ಕೆ ರ‍್ಯಾಪಿಡೋ ಬುಕ್​ ಮಾಡಿಕೊಂಡಿದ್ದರು. ರಾತ್ರಿಯಾಗಿತ್ತು. ಹೀಗಾಗಿ ಈ ಅಪ್ಲಿಕೇಷನ್​ನಲ್ಲಿ ವಿಶೇಷವಾಗಿರುವ ರೇಟಡ್​ ಬೈ ವುಮೆನ್​ ವರ್ಷನ್​ನಲ್ಲಿ ಬೈಕ್ ಬುಕ್ ಮಾಡಿಕೊಂಡರು. ಮಹಿಳೆಯರಿಂದ ಹೆಚ್ಚು ರೇಟಿಂಗ್​ ಗಳಿಸಿದ ಸೈಯದ್ ರ‍್ಯಾಪಿಡೋ ರೈಡ್​ ಅಕ್ಸೆಪ್ಟ್​ ಮಾಡಿಕೊಂಡ​..ಪ್ರಯಾಣಿಸುತ್ತಿರುವಾಗ ಈತ ಮಧ್ಯೆ ಮಧ್ಯೆ ಅನಾವಶ್ಯಕವಾಗಿ ಇರಿಟೇಟ್ ಆಗುವಂತೆ ಮಾತನಾಡುತ್ತಿದ್ದ. ರೇನ್​ ಕೋಟ್ ಬೇಕಾ ಎಂದು ಸಹ ಕೇಳಿದ್ದಾನೆ. ಯುವತಿ, ಬೇಡ ಎಂದು ನೇರವಾಗಿ ಹೇಳಿದರೂ ಸಹ ಬಿಡದ ಆತ ಅನಗತ್ಯವಾಗಿ ಆಕೆಯೊಂದಿಗೆ ಮಾತಿಗೆ ಇಳಿದಿದ್ದಾನೆ.

ಹೆಲ್ಮೆಟ್ ತೆಗೆದುಕೊಳ್ಳುವ ನೆಪದಲ್ಲಿ ಕೈ ಸವರಿದ

ಯುವತಿಯನ್ನು ಡ್ರಾಪ್​ ಮಾಡಿದ ಬಳಿಕ ಆಕೆ ಹೆಲ್ಮೆಟ್​ ಹಿಂದಿರುಗಿಸುವಾಗ ಕೈ ಸವರಲು ಯತ್ನಿಸಿದ್ದಾನೆ. ಇನ್ನೂ ಹಣ ಪಾವತಿ ಮಾಡುವ ವೇಳೆ, ಸ್ಕ್ಯಾನರ್ ವರ್ಕ್​ ಆಗ್ತಿಲ್ಲ. ನಂಬರ್​ ತಗೊಳ್ಳಿ ಎಂದು ನಾಟಕವಾಡಿದ್ದ. ಆತನ ಬಗ್ಗೆ ಅರಿತ ಯುವತಿ ಬೇಡ ಎಂದು ಸ್ಕ್ಯಾನರ್​ಗೆ ಹಣ ಪಾವತಿ ಮಾಡಿದ್ದಾಳೆ.

ಆನಂತರ ಸ್ಕ್ಯಾನರ್ ಕೇಳಿ ಪೇ ಮಾಡಿದ ನಂತರ ಅಲ್ಲಿಂದ ಹೊರಡದೆ ಗುರಾಯಿಸಿ ಆಕೆಯನ್ನು ನೋಡುತ್ತಾ ನಿಂತಿರುವುದನ್ನು ಆಕೆ ಗಮನಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ. ಇಷ್ಟೇ ಅಲ್ಲದೇ ಸೆಕ್ಯೂರಿಟಿ ಗಾರ್ಡ್ ಹೇಳಿದ್ರು ಅಲ್ಲೇ ನಿಂತು ನೋಡುತ್ತಿದ್ದರಂತೆ ಈ ಘಟನೆ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಹಂಚಿಕೊಂಡ ಯುವತಿ.

ರಾತ್ರಿಯಾಗಲಿ, ಹಗಲಿನಲ್ಲಾಗಲಿ ಯುವತಿಯರು ಪ್ರಯಾಣಿಸುವಾಗ ಇಂತಹ ಪುಂಡರೊಟ್ಟಿಗೆ ಹುಷಾರಾಗಿರಿ. ಒಂದು ನಿಮ್ಮ ಪರಿಚಿತರ ಜೊತೆಗೆ ಟಚ್​ನಲ್ಲಿ ಮಾತನಾಡಿ, ಇಲ್ಲವಾದಲ್ಲಿ ಸಮಸ್ಯೆಯಲ್ಲಿ ಸಿಕ್ಕಿ ಹಾಕಿಕೊಳ್ಳುವುದು ಗ್ಯಾರಂಟಿ ಎಂದು ಕಾಮೆಂಟ್ ಮಾಡಿದ್ದಾರೆ, (ಏಜೆನ್ಸೀಸ್).