ನ್ಯೂಸ್

ಜೂನ್​ 2ರಿಂದ ಸಿಲಿಕಾನ್​ ಸಿಟಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮಳೆ…!

ಬೆಂಗಳೂರು: ಜೂನ್ 2ರ ನಂತರ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಕೇರಳದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು ಭಾರೀ ಮಳೆಯಾಗ್ತಿದೆ. ಹೀಗಾಗಿ ಜೂನ್ 2ರಿಂದ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಭಾರೀ ಮಳೆಯಾಗಲಿದೆ.


ಈ ಬಾರಿ ಬೆಂಗಳೂರು ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ಕಟ್ಟೆಚ್ಚರ ಅಗತ್ಯವಿದೆ. ಬಿಬಿಎಂಪಿಗೆ ಮುನ್ನಚ್ಚರಿಕೆ ವಹಿಸುವಂತೆ ರಾಜ್ಯ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್ ಪಾಟೀಲ ಸೂಚನೆ ನೀಡಿದ್ದಾರೆ.


ಗಂಟೆಗೆ 40-50 ಕಿಲೋ ಮೀಟರ್ ವೇಗದಲ್ಲಿ ನಗರದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆಯಿದ್ದು, ಜೂನ್​ 2ರಿಂದ ಬಿರುಗಾಳಿ ಸೇರಿದಂತೆ ಮಳೆಯಾಗಲಿದೆ ಎಂದ ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.


ರಾಜ್ಯ ರಾಜಧಾನಿ ಬೆಂಗಳೂರಲ್ಲೇ ಅತೀ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಒಣ ಮರಗಳು, ಶಿಥಿಲ ಕಟ್ಟಡಗಳ ಬಗ್ಗೆ ನಿಗಾವಹಿಸಲು ಹವಾಮಾನ ತಜ್ಞರ ಮುನ್ಸೂಚನೆ ನೀಡಿದ್ದಾರೆ.
ಕಳೆದೆರೆಡು ದಿನದಿಂದ ಮಳೆರಾಯ ಕೊಂಚ ಬ್ರೇಕ್​ ನೀಡಿದ್ದು ಜೂನ್​ 2ರಿಂದ ಅಬ್ಬರಿಸಿ ಬೊಬ್ಬೆರೆಯಲಿದ್ದಾನೆ. ಬೆಂಗಳೂರಲ್ಲಿ ತಾಪಮಾನ ಹೆಚ್ಚಾಗುತ್ತಲೇ ಇದೆ. ಸದ್ಯ ಬೆಂಗಳೂರಿಗರು ಮಳೆಯಾಯ ಶೀಘ್ರವೇ ತಂಪೆರಯಲಿ ಎಂದು ಕಾದು ಕುಳಿತಿದ್ದಾರೆ.