ಬೆಂಗಳೂರು: ಬಹುತೇಕ ಚಟುವಟಕೆ ಆನ್ಲೈನ್ ಆಗಿರುವುದರಿಂದ ಸೈಬರ್ ಅಪರಾಧಗಳ ಪ್ರಮಾಣ ಮತ್ತು ವ್ಯಾಪ್ತಿ ಹೆಚ್ಚುತ್ತಲೇ ಇದೆ. ತಂತ್ರಜ್ಞಾನ ಉನ್ನತಿಗೊಂಡಂತೆಲ್ಲಾ ಅಪರಾಧಗಳ ಮಟ್ಟವೂ ಮೇಲೇರುತ್ತಿದೆ.
ಲಿಕಾನ್ ಸಿಟಿಯಲ್ಲಿ ಹೊಸ ಹೊಸ ರೀತಿಯ ಸೈಬರ್ ಕ್ರೈಮ್ಗಳು ಜರುಗುತ್ತಿರುವುದು ಬೆಳಕಿಗೆ ಬರುತ್ತಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕ್ಯುಆರ್ ಕೋಡ್ ಸಂಬಂಧಿತ ಸೈಬರ್ ಕ್ರೈಮ್ ಪ್ರಕರಣಗಳು ಹೆಚ್ಚು ನಡೆದಿರುವುದು ಪೊಲೀಸರಿಗೆ ತಲೆನೋವು ತರಿಸಿದೆ.
ಈಗಾಗಲೇ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, 20,662 ಪ್ರಕರಣಗಳು ಕ್ಯುಆರ್ ಕೋಡ್ ಸ್ಕ್ಯಾಮ್ಗಳು, ಡೆಬಿಟ್ ಕಾರ್ಡ್ ದುರುಪಯೋಗ, ವಂಚಕ ಲಿಂಕ್ ಇತ್ಯಾದಿ ಮೂಲಕ ಹಣ ಲಪಟಾಯಿಸುವ ಪ್ರಕರಣಗಳೇ ಆಗಿವೆ. ಅಂದರೆ ಸೈಬರ್ ಕೇಸ್ಗಳಲ್ಲಿ ಶೇ. 40ಕ್ಕಿಂತ ಹೆಚ್ಚು ಇಂಥ ಪ್ರಕರಣಗಳೇ ಇವೆ.
ಅಂತೆಯೇ ನಗರದ ಪೊಲೀಸರು ಸೈಬರ್ ಅಪರಾಧಗಳ ಬಗ್ಗೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನ ಹಂಚಿಕೊಳ್ಳುತ್ತಿರುತ್ತಾರೆ. ನಿನ್ನೆ ಕೂಡ (ಆಗಸ್ಟ್ 22) ಬೆಂಗಳೂರು ನಗರ ಪೊಲೀಸರು ಒಟಿಪಿ ಇತ್ಯಾದಿಯನ್ನು ಮೊಬೈಲ್ಗಳಲ್ಲಿ ಶೇರ್ ಮಾಡದಿರಿ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದಾರೆ. ಗಮನಾರ್ಹ ವಿಚಾರ ಏನಂದ್ರೆ ಬೆಂಗಳೂರು ಪೊಲೀಸರ ವಾರದ ಸಭೆಗಳಲ್ಲಿ ಕ್ಯೂಆರ್ ಕೋಡ್ ಹಗರಣಗಳ ಬಗ್ಗೆಯೇ ಹೆಚ್ಚು ಚರ್ಚೆಯಾಗುತ್ತದಂತೆ.