ಹಣಕ್ಕಾಗಿ ಕಿಡ್ನ್ಯಾಪ್ ನಾಟಕವಾಡಿದ್ದ ಕಾಂಟ್ರ್ಯಾಕ್ಟರ್ ಮನೀಶ್ ಪಟೇಲ್.
ಮಗನನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು 90 ಲಕ್ಷ ರೂ.ಗೆ ಬೇಡಿಕೆ.
ವಿದ್ಯುತ್ ಕಾಂಟ್ರಾಕ್ಟ್ ಕೆಲಸದಲ್ಲಿ ನಷ್ಟವಾಗಿ 1.5 ಕೋಟಿ ರೂ. ಸಾಲ ಮಾಡಿಕೊಂಡಿದ್ದ ಮನೀಶ್.
ಸಾಲದ ಸುಳಿಯಲ್ಲಿ ಸಿಲುಕಿದ್ದ ವ್ಯಕ್ತಿಯೊಬ್ಬ ತಾನು ಕಿಡ್ನಾಪ್ ಆಗಿದ್ದೇನೆ ಎಂದು ನಾಟಕವಾಡಿ, ತಂದೆಯಿಂದಲೇ ಹಣ ದೋಚಲು ಹೋಗಿ ಪೊಲೀಸರ ಕೈಗೆ ತಗ್ಲಾಕ್ಕೊಂಡ ಘಟನೆ ಬೆಂಗಳೂರಿನ ಆರ್ ಆರ್ ನಗರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಆರ್.ಆರ್. ನಗರದ ನಿವಾಸಿಯೂ ಹಾಗೂ ಕಂಟ್ರ್ಯಾಕ್ಟರ್ ಆಗಿರುವ ಮನೀಶ್ ಪಟೇಲ್ (40) ಅನ್ನು ಪೊಲೀಸರು ಬಂಧಿಸಿದ್ದಾರೆ.
ಸೆ.29ರಂದು ಅವರ ತಂದೆ ಮನೋಹರ್ ಪಾಟೀಲ್ಗೆ ಬೆಳಿಗ್ಗೆ 8 ಗಂಟೆ ಸುಮಾರಿಗೆ ಮನೀಷ್ ಮೊಬೈಲ್ನಿಂದ ವಾಟ್ಯಾಪ್ ಕರೆ ಬಂದಿದೆ. ನಿಮ್ಮ ಮಗನನ್ನು ಕಿಡ್ನ್ಯಾಪ್ ಮಾಡಿದ್ದೇವೆ ನಾವು ಹೇಳಿದ ಜಾಗಕ್ಕೆ 90 ಲಕ್ಷ ರೂ. ಹಣಕ್ಕೆ ತಂದು ಕೊಡಿ ಎಂದು ಆತನ ಸ್ನೇಹಿತರಿಂದ ಡಿಮ್ಯಾಂಡ್ ಮಾಡಿ ಕೇಳಲಾಗಿತ್ತು.
ಮನೀಷ್ ವ್ಯವಹಾರದ ವಿಚಾರವಾಗಿ ಗದಗಕ್ಕೆ ಟ್ರೈನ್ನಲ್ಲಿ ತೆರಳುತ್ತೇನೆ. ಬೆಳಿಗ್ಗೆ ಕಾಲ್ ಮಾಡಿ ಹೇಳ್ತಿನಿ ಎಂದಿದ್ದ. ಆದರೆ ಆ ಮಧ್ಯೆ ಮನೀಷ್ನನ್ನು ಕಿಡ್ನ್ಯಾಪ್ ಮಾಡಿದ್ದೇವೆ ಎಂದು ಬಂದಿದ್ದ ಕರೆ ಮನೋಹರ್ ಆತಂಕಗೊಂಡು ಆರ್ಆರ್ ನಗರ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು. ಮನೀಷ್ ಮೊಬೈಲ್ಗೆ ಒಟ್ಟು ನಾಲ್ಕೈದು ಬಾರಿ ಕರೆ ಮಾಡಿ ಟ್ರ್ಯಾಕ್ ಮಾಡಲು ಯತ್ನಿಸಿದರು. ಆದರೆ ಮೊಬೈಲ್ ಸ್ವಿಚ್ ಆಫ್ ಆಗಿರುವುದು ಗೊತ್ತಾಗಿದೆ. ನಂತರ ಹಣ ಅರೇಂಜ್ ಆಯ್ತಾ ಎಂದು ವಾಪಸ್ ಕರೆ ಮಾಡಿದ್ದರು, ಈ ವೇಳೆ ಅದೇ ನಂಬರ್ ಅನ್ನು ತೆಗೆದುಕೊಂಡು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಮನೀಷ್ ಅವರು ಸ್ನೇಹಿತರ ಜೊತೆ ಅರಾಮಾಗಿ ಇರುವುದು ಕಂಡುಬಂದಿದೆ.
ಇದನ್ನೂ ಓದಿ: ಖೋಟಾ ನೋಟು ಚಲಾವಣೆ ಜಾಲ ಪತ್ತೆ 7 ಬಂಧನ
ಮನೀಷ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ ಪೊಲೀಸರಿಗೆ ಆತ ಹೇಲಿದ್ದಿಷ್ಟು, ಇತ್ತೀಚೆಗೆ ಎಲೆಕ್ಟ್ರಿಕ್ ಕಾಂಟ್ರ್ಯಾಕ್ಟ್ ವಿಚಾರವಾಗಿ 1.5 ಕೋಟಿ ಸಾಲ ಮಾಡಿಕೊಳ್ಳಲಾಗಿತ್ತು. ಇದನ್ನು ತೀರಿಸಲು ಕಿಡ್ನ್ಯಾಪ್ ನಾಟಕವಾಡಿದ್ದಾಗಿ ಮನೀಷ್ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, (ಏಜೆನ್ಸೀಸ್).