ನ್ಯೂಸ್

ಒಂದು ವರ್ಷಕ್ಕೆ ಈತ ಊಟಕ್ಕೆ ಮಾಡಿದ ವೆಚ್ಚವೆಷ್ಟು ಗೊತ್ತ?; ದೇಶದಲ್ಲೇ ಅತಿ ಹೆಚ್ಚು ಖರ್ಚು ಮಾಡಿದ ಈತ ಬೆಂಗಳೂರಿನವ!

ಬೆಂಗಳೂರು: ಹೊಟೇಲ್​ಗೆ ಊಟಕ್ಕೆ ಹೋದರೆ ಎಷ್ಟು ಬಿಲ್​ ಆಗಬಹುದು. ಇದನ್ನೆಲ್ಲ ಯೋಚನೆ ಮಾಡದೆ ಮೊದಲು ಊಟ ಮಾಡಿ ಮುಗಿಸುತ್ತೇವೆ. ಇದಕ್ಕೆ ನಮ್ಮ ಬಜೆಟ್​ಗೆ ಅನುಗುಣವಾಗಿ ಹೊಟೇಲ್​ ಆಯ್ದುಕೊಂಡಿರುತ್ತವೆ.

ಆದರೆ ಈ ಮನುಷ್ಯ 2019ರಲ್ಲಿ ಊಟಕ್ಕಾಗಿ ಖರ್ಚು ಮಾಡಿರುವುದು ಬರೋಬ್ಬರಿ 2.8 ಲಕ್ಷ ರೂಪಾಯಿಗಳನ್ನು. ಹೌದು, ಇದು ನಡೆದಿರುವುದು ಪ್ರಪಂಚದ ಯಾವುದೋ ಮೂಲೆಯಲ್ಲಿ ಅಲ್ಲ. ಬದಲಿಗೆ ಈತ ಬೆಂಗಳೂರಿನವನು.

2019ರಲ್ಲಿ ಈ ರೀತಿ ಬಿಲ್​ ಬಗ್ಗೆ ಯೋಚನೆ ಮಾಡದೆ ಊಟ ಮಾಡಿದವರ ವಿವರ ಈಗ ಲಭ್ಯವಾಗಿದೆ. ರೆಸ್ಟೂರೆಂಟ್​ ಸೆಲ್ಯೂಷನ್​ ಕಂಪನಿ ಡೈನ್​ ಔಟ್​ ಎಂಬ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ಭಾರತ ದೇಶಾದ್ಯಂತದ ವರದಿಗಳಿವೆ.

ಭಾರತ ದೇಶದಲ್ಲಿ ಉಳಿದೆಲ್ಲ ನಗರಗಳಿಗಿಂತ ಬೆಂಗಳೂರಿನಲ್ಲಿ ಹೆಚ್ಚು ಹೊಟೇಲ್​ಗಳಲ್ಲಿ ಊಟ ಮಾಡುವವರು ಹೆಚ್ಚು ಎನ್ನುತ್ತದೆ ಆ ವರದಿ. ಇದೇ ವರದಿಯಲ್ಲಿ ಬೆಂಗಳೂರಿಗನೊಬ್ಬ 2,76,988 ರೂಪಾಯಿಯಷ್ಟು ಬಿಲ್​ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಅದರಲ್ಲೂ ಬೆಂಗಳೂರು ಒಂದರಲ್ಲೇ ಒಂದು ದಿನಕ್ಕೆ 10 ಲಕ್ಷ ಮಂದಿ ಹೊಟೇಲ್​ ಮೇಲೆ ಅವಲಂಬಿತರಾಗಿದ್ದಾರೆ.

ವರದಿ ಪ್ರಕಾರ ವರ್ಷದಲ್ಲಿ 5 ಬಿಲಿಯನ್​ನಷ್ಟು ಮಂದಿ ಹೊಟೇಲ್​ನಲ್ಲಿ ಊಟ ಮಾಡುತ್ತಾರೆ. ಪ್ರತಿ ಗಂಟೆಗೆ 4566 ಟೇಬಲ್​ಗಳು ಊಟಕ್ಕಾಗಿ ಬುಕ್​ ಮಾಡಲಾಗುತ್ತದೆ. 300 ರೂಪಾಯಿಗಳಿಂದ 1600 ರೂಪಾಯಿಗಳವರೆಗೆ ಒಂದು ಊಟಕ್ಕೆ ವ್ಯಯಿಸಲಾಗುತ್ತದೆ ಎನ್ನುತ್ತದೆ ವರದಿ.

ಇನ್ನು ರಾಷ್ಟ್ರ ರಾಜದಾನಿ ದೆಹಲಿ ಕತೆಯೇ ಬೇರೆ ಇದೆ. ಇಲ್ಲಿನ ಒಂದುಮ ಕುಟುಂಬ ವರ್ಷಕ್ಕೆ 179 ಬಾರಿ ಹೊಟೇಲ್​ ಊಟಕ್ಕೆ ತೆರಳುತ್ತಾರೆ. ಜತೆಗೆ 3.5 ಲಕ್ಷ ರೂಪಾಯಿಗಳನ್ನು ಆ್ಯಪ್​ ಬಳಸುವ ಮೂಲಕ ಉಲಿತಾಯ ಮಾಡುತ್ತಾರೆ.

ಇಡೀ ಭಾರತದಲ್ಲಿ ಅತಿ ಹೆಚ್ಚು ಊಟ ಮಾಡುವ ಅಥವಾ ಆರ್ಡರ್​ ಮಾಡಿರುವುದು ನಾರ್ಥ ಇಂಡಿಯನ್​ ಶೈಲಿಯ ಊಟಕ್ಕೆ ಎನ್ನುವುದು ವಿಶೇಷ! (ಏಜೆನ್ಸೀಸ್​)