ನ್ಯೂಸ್

ಕೋಣಗಳ ಓಟ ಕಣ್ತುಂಬಿಕೊಳ್ಳಲು ಹರಿದುಬಂದ ಜನ; ಅರಮನೆ ಮೈದಾನದಲ್ಲಿ ಮೇಳೈಸಿದ ಕರಾವಳಿ ಸೊಗಡು

Bengaluru - General - Rama Kishan K V

ಬೆಂಗಳೂರು: ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಕರಾವಳಿ ನೆಲದ ಕಂಬಳ ಕೋಣಗಳ ಓಟ ಕಣ್ತುಂಬಿಕೊಳ್ಳಲು ಜನಸಾಗರ ಹರಿದುಬಂದಿತ್ತು. ಅಲೇ ಬುಡಿಯೆರ್​.... ಏ, ತೂಲಯ ಅಲ್ಪ ಗೋಣೆರ್​ ಬಲಿಪು$್ಪನೆ... ಏರ್​ ವಿನ್​ ಆಯೆರ್​ಗೆ? ಆಯೆನ್​ ಸಿಕ್ಸ್​ ಪ್ಯಾಕ್​ ತೂಲಯಾ... ಬಲೆ ಮರ್ರೆ, ಒಂಜಿ ಸೆಲ್ಫಿ ದೆಪು$್ಪಗ... ುಡ್​ ಕೋರ್ಟ್​ ಪೋಯಿ, ಬೆಚ್ಚ ಬೆಚ್ಚ ಚಾ ಪರ್ಕ... ಗೋಳಿ ಬಜೆ ತಿನ್ಕ...ಅರಮನೆ ಮೈದಾನದಲ್ಲಿ ಭೇಟಿ ಕೊಟ್ಟರೆ ಕಿವಿಗೆ ಕೇಳಿಸುವ ಮಾತುಗಳಿವು....

ಕಂಬಳ ಮೈದಾನದ ಒಳಭಾಗಕ್ಕೆ ಆಗಮಿಸುತ್ತಿದ್ದಂತೆ ಕರಾವಳಿ ಭಾಗದ ಹಳ್ಳಿಯೊಂದಕ್ಕೆ ಭೇಟಿ ಕೊಟ್ಟಂತಹ ಅನುಭವವಾಗುತ್ತದೆ. ಸಿನಿಮಾ, ಸಾಮಾಜಿಕ ಜಾಲತಾಣದ ಮೂಲಕ ಕಂಬಳವನ್ನು ಕಂಡಿದ್ದ ಮಂದಿ, ಇದೇ ಮೊದಲ ಬಾರಿಗೆ ನೇರವಾಗಿ ಕೋಣಗಳ ಓಟವನ್ನು ಕಣ್ತುಂಬಿಕೊಂಡರು. ಬೆಂಗಳೂರಿನಲ್ಲಿ ಕಂಬಳ ನಡೆಯುತ್ತಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆ ಜನರು ಆಶ್ಚರ್ಯ ಪಟ್ಟಿದ್ದರು. ರಾಜಧಾನಿಯಲ್ಲಿ ನೆಲೆಸಿರುವ ಕರಾವಳಿ ಭಾಗದ ಮಂದಿಯಲ್ಲಿ, ಅರ್ರೆ, ನಮ್ಮೂರಿನಲ್ಲಿ ನಡೆಯುವ ಜಾನಪದ ಕ್ರೀಡೆ, ಇಲ್ಲಿ ನಡೆಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಿದ್ದು, ಬೆಂಗಳೂರು ಕಂಬಳಕ್ಕೆ ಮೊದಲ ದಿನ ಬೆಳಗ್ಗಿನಿಂದಲೇ ಸಾಲು ಸಾಲಾಗಿ ಜನರು ಬಂದಿದ್ದಾರೆ. ಅರಮನೆ ಮೈದಾನದಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಕಂಡು ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.

ಬೆಂಗಳೂರಿನಲ್ಲಿರುವ ವಿವಿಧ ಭಾಗಗಳ ಮಂದಿ, ಕರಾವಳಿ ಕಂಬಳವನ್ನು ಕಂಡು "ವಾವ್​' ಎಂದಿದ್ದಾರೆ. ಜತೆಗೆ ಸಾಂಸತಿಕ ವೇದಿಕೆಯಲ್ಲಿ ನಡೆಯುತ್ತಿದ್ದ ಹುಲಿ ಕುಣಿತ, ಕರಂಗೋಲು ನೃತ್ಯ, ಆಟಿ ಕಳಂಜ, ಕಂಬಳದ ಪದ ನಲಿಕೆ, ಮಂಕಾಳಿ ನೃತ್ಯ ವೀಸುತ್ತಾ ಕರಾವಳಿಯ ಸಾಂಸತಿಕ ಶ್ರೀಮಂತಿಕೆಯನ್ನು ಅನುಭವಿಸಿದರು.

ಕಂಬಳ ನೋಡಲು ಬಂದ ಜನರು ಸೆಲ್ಫಿ ತೆಗೆಯುತ್ತಾ ಸಂತಸ ಪಡುತ್ತಿದ್ದ ದೃಶ್ಯ ಸಾಮಾನ್ಯ ಎಂಬಂತಿತ್ತು. ಅದರಲ್ಲೂ ಸಿಕ್ಸ್​ ಪ್ಯಾಕ್​ ಹೊಂದಿದ್ದ, ಕಟ್ಟು ಮಸ್ತು ದೇಹದ ಓಟಗಾರರೊಂದಿಗೆ ಜನರು ಸೆಲ್ಫಿ ೋಸ್​ ಕೊಡುವಂತೆ ವಿನಂತಿಸಿಕೊಳ್ಳುತ್ತಿದ್ದರು. ಜತೆಗೆ ಕಂಬಳ ಕೋಣಗಳ ಪ್ರತಿಕೃತಿ ಜತೆಗೆ ೋಟೋ ತೆಗೆಸಿಕೊಳ್ಳುತ್ತಿದ್ದರು. ಕಂಬಳ ಕರೆಯ ಸಮೀಪ ಹೋಗಲು ಅವಕಾಶ ಇಲ್ಲದ ಕಾರಣ, ದೂರದಿಂದಲೇ ಕೋಣಗಳ ಓಟವನ್ನು ಜನರು ತಮ್ಮತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದರು.

ಸೆಲ್ಫಿ ತೆಗೆಯಿರಿ, ಕೋಣಗಳನ್ನು ಮುಟ್ಟಬೇಡಿ!

ಕಂಬಳ ನೋಡಲು ಬಂದ ಬಹುತೇಕರಿಗೆ ಕೋಣಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು, ಬಳಿಕ ವಾಟ್ಸ್​ಆ್ಯಪ್​ನಲ್ಲಿ ಸ್ಟೇಟಸ್​ ಹಾಕಬೇಕು ಎಂಬ ಆಸೆ ವ್ಯಕ್ತವಾಗುವುದು ಸಹಜ. ಆದರೆ ಕೋಣಗಳನ್ನು ನೋಡಿಕೊಳ್ಳುತ್ತಿದ್ದ ತಂಡ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಬಿಡುತ್ತಿರಲಿಲ್ಲ. ಹತ್ತಿರದಿಂದ ಬೇಡ, ಬೇಕಿದ್ದರೆ ದೂರದಿಂದಲೇ ಸೆಲ್ಫಿ ತೆಗೆಯಿರಿ ಎನ್ನುತ್ತಿದ್ದರು. ಕೋಣಗಳು ತಂಗಿದ್ದ ಟೆಂಟಿನ ಒಳಬಂದು ವೀಸಬಹುದು. ಆದರೆ, ಚಪ್ಪಲಿ ಹೊರಗಿಟ್ಟ ಬರಬೇಕು, ಕೋಣಗಳನ್ನು ಮುಟ್ಟಬಾರದು ಎಂದು ಅಲ್ಲಿದ್ದ ಮಂದಿ ಸೂಚನೆ ನೀಡುತ್ತಿದ್ದರು.