ನ್ಯೂಸ್

ಸಂಚಾರ ದಟ್ಟಣೆ ಪಟ್ಟಿಯಲ್ಲಿ ಮುಂಬೈ-ಬೆಂಗಳೂರು

ಮುಂಬೈ: ಜಿಪಿಎಸ್ ನ್ಯಾವಿಗೇಷನ್ ಸಾಧನವನ್ನು ತಯಾರು ಮಾಡುವ ಭೌಗೋಳಿಕ ಪ್ರದೇಶ ತಂತ್ರಜ್ಞಾನದ ಟಾಮ್ ಟಾಮ್ ಸಂಸ್ಥೆ, ವಿಶ್ವದ 58 ದೇಶಗಳ 404 ನಗರಗಳಲ್ಲಿ 2021ರಲ್ಲಿ ವಾಹನ ಸಂಚಾರ ದಟ್ಟಣೆಯ ಸಮೀಕ್ಷೆ ನಡೆಸಿದ್ದು, ಮೊದಲ 10 ನಗರಗಳಲ್ಲಿ ಮುಂಬೈ 5 ಮತ್ತು ಬೆಂಗಳೂರು 10ನೇ ಸ್ಥಾನದಲ್ಲಿವೆ. ದೆಹಲಿ 11 ಮತ್ತು ಪುಣೆಯನ್ನು 21ನೇ ಸ್ಥಾನದಲ್ಲಿ ಗುರುತಿಸಲಾಗಿದೆ. ಇದು ಟಾಮ್ ಟಾಮ್ ಸಂಸ್ಥೆಯ 11ನೇ ಆವೃತ್ತಿಯ ವರದಿ ಆಗಿದೆ.

  • 2020ರಲ್ಲಿ ಮುಂಬೈ (2) ಬೆಂಗಳೂರು (6), ದೆಹಲಿ (8) ಮೊದಲ 10 ಸ್ಥಾನದಲ್ಲಿ ಇದ್ದವು. ಕಳೆದ ವರ್ಷ 56 ದೇಶಗಳ 416 ಸಿಟಿಗಳನ್ನು ಅತಿ ಸಂಚಾರ ದಟ್ಟಣೆಯ ನಗರಗಳೆಂದು ಟಾಮ್ ಟಾಮ್ ಟ್ರಾಫಿಕ್ ಇಂಡೆಕ್ಸ್ ಗುರುತಿಸಿತ್ತು.
  • ಭಾರತದಲ್ಲಿ ಕೋವಿಡ್ ಪೂರ್ವದ ಸ್ಥಿತಿಗೆ ಹೋಲಿಸಿದರೆ 2021ರಲ್ಲಿ ಶೇ. 23ರಷ್ಟು ಒಟ್ಟಾರೆ ಟ್ರಾಫಿಕ್ ಇಳಿಕೆ ಆಗಿದೆ. ಪೀಕ್ ಅವಧಿಯಲ್ಲಿ ಟ್ರಾಫಿಕ್ ಶೇ. 31ರಷ್ಟು ಕಡಿಮೆ ಆಗಿದೆ ಎಂದು ತಿಳಿಸಿದೆ.
  • 2021ರ ಸಾಲಿನಲ್ಲಿ ಬೆಂಗಳೂರಿನ ಟ್ರಾಫಿಕ್ ಶೇ.32ರಷ್ಟು ಇಳಿಕೆ
ಖಾಸಗಿ ವಾಹನ ಹೆಚ್ಚಳ: ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಯಾದರೂ ರಸ್ತೆಗಿಳಿಯುತ್ತಿರುವ ಖಾಸಗಿ ವಾಹನಗಳ ಸಂಖ್ಯೆ ಹಿಂದೆಂದಿ ಗಿಂತಲೂ ಹೆಚ್ಚಳವಾಗಿದೆ. ಲಾಕ್​ಡೌನ್ ಪರಿಣಾಮ ದಿಂದ ಬಹುತೇಕರು ಖಾಸಗಿ ವಾಹನಗಳ ಮೊರೆ ಹೋಗಿ ದ್ದಾರೆ. ಆದರೆ ಬಹುತೇಕರು ಎಲೆಕ್ಟ್ರಿಕ್ ವಾಹನ ಖರೀದಿಗೆ ಆಸಕ್ತಿ ತೋರಿದ್ದಾರೆ. ಆರ್​ಟಿಒ ಮಾಹಿತಿ ಪ್ರಕಾರ 2018ರಲ್ಲಿ ಕೇವಲ 3,806 ವಿದ್ಯುತ್ ಚಾಲಿತವಾಹನ ನೋಂದಣಿಯಾಗಿತ್ತು, 2021ರ ನವೆಂಬರ್ ವೇಳೆಗೆ ಈ ಪ್ರಮಾಣ 22, 264ಕ್ಕೆ ಏರಿಕೆಯಾಗಿದೆ. ಅದರಲ್ಲೂ 19, 615 ದ್ವಿಚಕ್ರ ವಾಹನ ನೋಂದಣಿಯಾಗಿದೆ.