ಸಾಂದರ್ಭಿಕ ಚಿತ್ರ 
ನ್ಯೂಸ್

ಕಾಣೆಯಾದ ಬೆಕ್ಕನ್ನು ಹುಡುಕಿ ಕೊಟ್ಟಿದ್ದೆ ಆದಲ್ಲಿ ಸಿಗಲಿದೆ ಕೈ ತುಂಬದ ಹಣ! ಹಣ್ಣು ಮಾರಾಟಗಾರ ಘೋಷಿಸಿದ ಬಿಗ್​ ಆಫರ್... Viral News​

ಪಶ್ಚಿಮಬಂಗಾಳ: (Viral News​) ಹಣ್ಣು ಮಾರಾಟಗಾರರೊಬ್ಬರು  ನಾಪತ್ತೆಯಾಗಿರುವ ತನ್ನ ಬೆಕ್ಕನ್ನು ಪತ್ತೆ ಹಚ್ಚಲು ಸಹಾಯ ಮಾಡಿದ್ದೇ ಆಗಿದ್ದಲ್ಲಿ 10,000 ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ನಿರ್ಮಲ್ ಬಿಸ್ವಾಸ್ ಪಶ್ಚಿಮ ಬಂಗಾಳದ ನಾಡಿಯಾ  ಪ್ರದೇಶದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ 4 ವರ್ಷಗಳಿಂದ ಬಿಳಿ ಬೆಕ್ಕನ್ನು ಸಾಕುಪ್ರಾಣಿಯಾಗಿ ಸಾಕುತ್ತಿದ್ದಾರೆ.

"ನಿರ್ಮಲ್ ಬಿಸ್ವಾಸ್ ಅವರ ಬೆಕ್ಕು ಕಳೆದ 15 ದಿನಗಳಿಂದ ಕಾಣೆಯಾಗಿದೆ. ಇದರಿಂದ ಮನನೊಂದ ಬಿಸ್ವಾಸ್ ತನ್ನ ಸಾಕು ಪ್ರಾಣಿಯನ್ನು ಹುಡುಕಲು ಕಠಿಣ ನಿರ್ಧಾರ " ಕೈಗೊಂಡಿದ್ದಾರೆ.

"ತಮ್ಮ ನಿವಾಸದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಪೀಕರ್ ಮೂಲಕ ಘೋಷಿಸಿದ್ದಾರೆ. ತನ್ನ ಬಿಳಿ ಬೆಕ್ಕು ಕಾಣೆಯಾಗಿದೆ ಮತ್ತು ಅದರ ತಲೆಯ ಹಿಂಭಾಗದಲ್ಲಿ ಕಪ್ಪು  ಬಣ್ಣ ಇದೆ. ಈ ಗುರುತು ಇರುವ ಬೆಕ್ಕನ್ನು ಯಾರಾದರೂ ಎಲ್ಲಿಯಾದರೂ ನೋಡಿದ್ದರೆ, ದಯವಿಟ್ಟು ಅದನ್ನು ನನಗೆ ತಿಳಿಸಿ. 10,000 ಬಹುಮಾನ ನೀಡುತ್ತೇನೆ ಎಂದು ತಮ್ಮ ಪ್ರಕಟಣೆಯಲ್ಲಿ" ತಿಳಿಸಿದ್ದಾರೆ.

ನಿರ್ಮಲ್ ಬಿಸ್ವಾಸ್ ಅವರ ಬೆಕ್ಕು ಎಂದರೆ ತುಂಬಾ ಇಷ್ಟ. ಬೆಕ್ಕನ್ನು ತುಂಬಾ ಚಿಕ್ಕದಾಗಿದ್ದಾಗ ತಾಯಿ ಮನೆಗೆ ಕರೆತಂದಿದ್ದು, ಅಂದಿನಿಂದ ತುಂಬಾ ಇಷ್ಟವಾಗುತ್ತಿತ್ತು ಎಂದು ಹೇಳಿದರು. ಅಲ್ಲದೆ, ಕಿರಿಯ ಮಗನ ಮರಣದ ನಂತರ ಬೆಕ್ಕು ಬೆಂಬಲ ನೀಡಿತು ಮತ್ತು ಬೆಕ್ಕಿನೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿತ್ತು ಎಂದು ಅವರು ಹೇಳಿದರು.