ನ್ಯೂಸ್

ಹೆಲ್ಮೆಟ್​​ ಧರಿಸಿದ ಬಸ್​​ ಚಾಲಕ; ಇಷ್ಟೊಂದು ಭದ್ರಗೆ ಇದೇ ಕಾರಣ..ವಿಡಿಯೋ ನೋಡಿ

ಕೋಲ್ಕತ್ತಾ: ನಬನ್ನಾ ಅಭಿಯಾನ್ ಪ್ರತಿಭಟನಾ ರ್ಯಾಲಿ ವೇಳೆ ಪೊಲೀಸರು ದಬ್ಬಾಳಿಕೆ ನಡೆಸಿದ್ದಾರೆ ಎಂದು ಆರೋಪಿಸಿರುವ ಭಾರತೀಯ ಜನತಾ ಪಕ್ಷ (ಬಿಜೆಪಿ) 12 ಗಂಟೆಗಳ 'ಬಂಗಾಳ ಬಂದ್'ಗೆ ಕರೆ ನೀಡಿದ್ದು, ಎಲ್ಲಡೆ ಭದ್ರತೆ ಕೈಗೊಳ್ಳಾಗಿದೆ. ಈ ವೇಳೆ ಬಸ್​ ಡ್ರೈವರ್​​ ಹೆಲ್ಮೆಟ್​​ ಧರಿಸಿ ಚಾಲನೆ ಮಾಡುತ್ತಿರುವ ಸುದ್ದಿಯೊಂದು ವೈರಲ್​​ ಆಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರಿ ಬಸ್​ಗಳ ಚಾಲಕರು ಮತ್ತು ಕಂಡಕ್ಟರ್​​​ಗಳಿಗೆ ಹೆಲ್ಮೆಟ್​​ ಧರಿಸಲು ಸೂಚನೆ ನೀಡಲಾಗಿದೆ. ಅದರಂತೆ ಕೂಚ್​​ ಬಿಹಾರ್​​ನಲ್ಲಿ ಉತ್ತರ ಬಂಗಾಳ ರಾಜ್ಯ ಸಾರಿಗೆ ಸಂಸ್ಥೆಯ (ಎನ್​​ಬಿಎಸ್​​ಟಿಸಿ) ಬಸ್​​ಗಳ ಚಾಲಕರು ಹೆಲ್ಮೆಟ್​​​ ಧರಿಸಿ ವಾಹನ ಚಲಾಯಿಸಿದ್ದಾರೆ.

'ಬಂದ್‌ಗೆ ಕರೆ ನೀಡಿರುವುದರಿಂದ ಸಾರಿಗೆ ಸಂಸ್ಥೆ ಎಲ್ಲರಿಗೂ ಹೆಲೈಟ್‌ಗಳನ್ನು ನೀಡಿದೆ. ಹಾಗಾಗಿ ಹೆಲೈಟ್ ಧರಿಸಿಯೇ ವಾಹನ ಚಲಾಯಿಸುತ್ತಿದ್ದೇವೆ. ಹೆಲೈಟ್ ಧರಿಸಿ ವಾಹನ ಚಲಾಯಿಸುವಂತೆ ಸರ್ಕಾರ ಆದೇಶಿಸಿದೆ. ಆದರೂ ನನಗೆ ಸ್ವಲ್ಪ ಭಯವಾಗುತ್ತಿದೆ ಎಂದು ಮತ್ತೊಬ್ಬ ಬಸ್ ಚಾಲಕ ತಮ್ಮ ಅಸಹಾಯಕತೆಯನ್ನು ಎಂದು ಬಸ್ ಚಾಲಕರೊಬ್ಬರು  ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 9ರಂದು ಕೋಲ್ಕತ್ತದ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ವೈದ್ಯ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಹಾಗೂ ಆಕೆಯ ಹತ್ಯೆಯ ಕಾರಣಕ್ಕೆ ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದ್ದು, ಈ ಒತ್ತಾಯದೊಂದಿಗೆ ರಾಜ್ಯದ ಸಚಿವಾಲಯ ತಲುಪಲು ಅವರು ಯತ್ನಿಸಿದ್ದರು. ಈ ವೇಳೆ ಪರಿಸ್ಥಿತಿ ಉದ್ವಿಗ್ನಕ್ಕೆ ಏರಿತು ಎನ್ನಲಾಗಿದೆ.