ನ್ಯೂಸ್

ಸ್ನೇಹಿತನ ಪತ್ನಿ ಮೇಲೆ ಕಣ್ಣು ಹಾಕಿದ್ರಾ ಬಳ್ಳಾರಿ ಪಾಲಿಕೆ ಸದಸ್ಯ?! ಎಫ್‍ಐಆರ್ ದಾಖಲು

ಬಳ್ಳಾರಿ: ಇದೀಗ ಬಳ್ಳಾರಿ ಪಾಲಿಕೆ ಸದಸ್ಯರೊಬ್ಬರು, ಅವರ ಸ್ನೇಹಿತನ ಪತ್ನಿ ಮೇಲೆ ಕಣ್ಣುಹಾಕಿರುವ ಆರೋಪ ಎದುರಿಸುತ್ತಿದ್ದು ಅವರು ಜೀವ ಬೆದರಿಕೆ ಹಾಕಿರುವ ಬಗ್ಗೆ ಎಫ್‍ಐಆರ್ ದಾಖಲಾಗಿದೆ.

ಬಳ್ಳಾರಿಯ 30ನೇ ವಾರ್ಡ್ ಕಾಂಗ್ರೆಸ್ ಸದಸ್ಯ ಎನ್ಎಂಡಿ ಆಸೀಫ್ ಬಾಷಾರನ್ನು ಅವರ ಸ್ನೇಹಿತ, ತನ್ನ ಪತ್ನಿ ಜತೆ ಅಕ್ರಮ ಸಂಬಂಧ ಇದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಸಂದರ್ಭ ಪಾಲಿಕೆ ಸದಸ್ಯ ಆಸೀಫ್, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತಾಗಿ ಆಸೀಫ್ ಅವರ ಸ್ನೇಹಿತ ಅಹಮದ್ ಹುಸೇನ್ ಎನ್ನುವರಿಂದ ಕೌಲ್ ಬಜಾರ್ ಠಾಣೆಯಲ್ಲಿ ದೂರು ದಾಖಲಾಗಿದೆ. “ಆಸೀಫ್, ನನ್ನ ಪತ್ನಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದನೆ, ಎಂದು ಪ್ರಶ್ನೆಸಿದ್ದಕ್ಕೆ ಜೀವ ಬೆದರಿಕೆ ಹಾಕಿದ್ದಾನೆ” ಎಂದು ಅಹಮದ್ ಆರೋಪ ಮಾಡಿದ್ದಾರೆ.

ಸದ್ಯ, ಆಸೀಫ್‍ ಹಾಗೂ ತನ್ನ ಪತ್ನಿಯ ಅಕ್ರಮ ಸಂಬಂಧದ ವಿಷಯ ತಿಳಿದು ಆತ್ಮಹತ್ಯೆಗೆ ಯತ್ನಿಸಿರುವ ಅಹಮದ್ ಹುಸೇನ್ ಫಿನಾಯಿಲ್ ಕುಡಿದು ಆತ್ಮಹತ್ಯಗೆ ಯತ್ನಿಸಿ ವಿಮ್ಸ್ ಆಸ್ಪತ್ರೆ ಗೆ ಸೇರಿದ್ದಾರೆ. ಅಹಮದ್ ಹುಸೇನ್ ದೂರಿನ ಹಿನ್ನೆಲೆ ಆಸೀಫ್ ವಿರುದ್ದ ಎಫ್ಐಆರ್ ಹಾಕಿ, ಐಪಿಸಿ 504, 506 ಅಡಿ ಕೌಲ್‍ ಬಜಾರ್‍ನ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

ಆಗಿದ್ದೇನು?

ಎಫ್ಐಆರ್‍ನಲ್ಲಿ, ಪಾಲಿಕೆ ಸದಸ್ಯ ಆಸೀಫ್ ಅಹಮದ್ ಹುಸೇನರ ಪತ್ನಿಯನ್ನು ಪಟಾಯಿಸಿದ್ದು ಹೇಗೆ? ಆ ಬಳಿಕ ಏನಾಯ್ತು ಎನ್ನುವುದು ಉಲ್ಲೇಖವಾಗಿದೆ.

ಆಸೀಫ್ ಹಾಗೂ ಅಹಮದ್ ಹುಸೇನ್ ಅತ್ಮೀಯ ಗೆಳೆಯರಾಗಿದ್ದು ಆಸೀಫ್ರ ಎಲ್ಲ ವ್ಯವಹಾರಗಳನ್ನು ಅಹಮದ್ ಹುಸೇನ್ ನೋಡಿಕೊಳ್ಳುತ್ತಿದ್ದರು. ಅಹಮದ್ ಹುಸೇನ್ ಮನೆಗೆ ಆಸೀಫ್ ಆಗಾಗಾ ಬಂದು ಹೋಗುತ್ತಾ ಇದ್ದ ಎಂದು ಹೇಳಲಾಗಿದ್ದು ಆಗ ಅಹಮದ್ ಹುಸೇನ್ ಪತ್ನಿ ನಸ್ರೀನಾಳ ಜತೆ ಸ್ನೇಹ, ಸಲುಗೆಯಿಂದ ವರ್ತಿಸುತ್ತಿದ್ದ ಎನ್ನಲಾಗಿದೆ. ಈ ಬಳಿಕ ಅಕ್ರಮ ಸಂಬಂಧ ಬೆಳೆಸಿದ್ದಾನೆ ಎಂದು ಆರೋಪಿಸಲಾಗಿದೆ.

ಕ್ರಮೇಣ ಈ ವಿಷಯ ಅಹಮದ್‍ಗೆ ತಿಳಿದಿದೆ. ಗೊತ್ತಾಗುತ್ತಿದ್ದಂತೆಯೇ ಅಹಮದ್, ಆಸೀಫ್‍ ಬಳಿ ಈ ವಿಚಾರವಾಗಿ ಪ್ರಶ್ನಿಸಿದ್ದಾರೆ. ಆಗ ಆಸೀಫ್ ಪ್ರಾಣ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದ್ದು “ನಿನ್ನನ್ನು ನಿನ್ನ ಕುಟುಂಬವನ್ನೂ ಜೀವ ಸಹಿತ ಬಿಡಲ್ಲ” ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದರಿಂದ ಮನನೊಂದ ಅಹಮದ್, ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.