ನ್ಯೂಸ್

ಮಹಾಕುಂಭ ಮೇಳದಿಂದ ವಾಪಸ್​ ಆಗುವಾಗ Heart Attack; ಬೆಳಗಾವಿ ಮೂಲದ ವ್ಯಕ್ತಿ ಸಾವು

ಬೆಳಗಾವಿ: ಮಹಾಕುಂಭ ಮೇಳವನ್ನು ಮುಗಿಸಿಕೊಂಡು ವಾಪಸ್​ ರೈಲಿನಲ್ಲಿ ವಾಪಸ್​ ಆಗುತ್ತಿದ್ದಾಗ ಬೆಳಗಾವಿ ಮೂಲದ ವ್ಯಕ್ತಿಯೊಬ್ಬರು ಹೃದಯಾಘಾತವಾಗಿ (Heart Attack) ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದ್ದು, ರವಿ ಜಟಾರ (61) ಎಂದು ಗುರುತಿಸಲಾಗಿದೆ.

ಕಳೆದ ಭಾನುವಾರ (ಜನವರಿ 26) ರವಿ ಹಾಗೂ ಸ್ನೇಹಿತರು ಮಹಾಕುಂಭಮೇಳದಲ್ಲಿ ಭಾಗಿಯಾಗಲು ಪ್ರಯಾಗ್​ರಾಜ್​ಗೆ ತೆರಳಿದ್ದರು. ಯಾತ್ರ ಮುಗಿಸಿ ರೈಲಿನಲ್ಲಿ ವಾಪಸ್ ಆಗುವಾಗ ಹೃದಯಾಘಾತವಾಗಿ ಪುಣೆಯಲ್ಲಿ ರವಿ ಅವರು ಮೃತಪಟ್ಟಿದ್ದು, ಸದ್ಯ ಅವರ ಮರಣೋತ್ತರ ಪರೀಕ್ಷೆಯನ್ನು ಮಾಡಲಾಗುತ್ತಿದೆ.

ಬೆಳಗಾವಿಯಿಂದ 100ಕ್ಕೂ ಅಧಿಕ ಭಕ್ತರು ಕುಂಭಮೇಳಕ್ಕೆ ತೆರಳಿದ್ದು, ಮೌನಿ ಅಮಾವಾಸ್ಯೆ ಪ್ರಯುಕ್ತ ಪುಣ್ಯಸ್ನಾನ ಮಾಡಲು ತೆರಳಿದ್ದ ನಾಲ್ವರು ಭಕ್ತರು ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ. ನಾಲ್ವರ ಮೃತದೇಹಗಳನ್ನು ಬೆಳಗಾವಿಗೆ ತರಲಾಗುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆರೆವೇರಿಸಿದ ಬಳಿಕ ಕುಟುಂಬಸ್ಥರಿಗೆ ಮೃತದೇಹವನ್ನು ಹಸ್ತಾಂತರಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ಜನವರಿ 13ರಂದು ಆರಂಭವಾಗಿರುವ ಮಹಾಕುಂಭ ಮೇಳವು ಫೆಬ್ರವರಿ 26ರವರೆಗೆ ನಡೆಯಲಿದ್ದು, ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಹಾಕುಂಭ ಮೇಳದಲ್ಲಿ ಭಕ್ತ ಪಾಲ್ಗೊಳ್ಳುವಿಕೆಯು ಗಿನ್ನೆಸ್​ ದಾಖಲೆಗೆ ಭಾಜನವಾಗಿದೆ.