ಬೆಳಗಾವಿಯಿಂದ ಅಂಕಲಗಿ ಕಡೆಗೆ ತೆರಳುತ್ತಿದ್ದ ಕಾರ್
ಬೆಳಗಾವಿ:ನಗರದ ಹೊರವಲಯದಲ್ಲಿರುವ ಕಣಬರಗಿ ಚೆಕ್ ಪೋಸ್ಟ್ ದಲ್ಲಿ ಬಳಿ ಖಾಸಗಿ ಬ್ಯಾಂಕ್ ಸಿಬ್ಬಂದಿಗಳು ಅಗತ್ಯ ದಾಖಲೆಗಳಿಲ್ಲದೇ ಅಕ್ರಮವಾಗಿ ಸಾಗಿಸುತ್ತಿದ್ದ ಕಾರ್ ಸಮೇತ 9 ಲಕ್ಷ ರೂ.ಹಣವನ್ನು ಮಂಗಳವಾರ ಸಾಯಂಕಾಲ ಮಾಳಮಾರುತಿ ಠಾಣೆ ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
ಬೆಳಗಾವಿ ನಗರದಿಂದ ಗೋಕಾಕ ತಾಲೂಕಿನ ಅಂಕಲಗಿ ಕಡೆಗೆ ಹೊರಟಿದ್ದ ಕಾರನ್ನು ಚೆಕ್ ಪೋಸ್ಟ್ ನಲ್ಲಿ ಸಂಚರಿಸುತ್ತಿದ್ದ ತಪಾಸಣೆಗೆ ಒಳಪಡಿಸಿದಾಗ 9 ಲಕ್ಷ ರೂ. ನಗದು ಪತ್ತೆಯಾಗಿದೆ. ಈ ಹಣವು ಖಾಸಗಿ ಫೈನಾನ್ಸ್ ಕಂಪನಿಗೆ ಸೇರಿದ್ದು, ಕೇಂದ್ರ ಸರ್ಕಾರದ ಬ್ಯಾಂಕಿನ ನಿಯಮಾವಳಿಗಳನ್ನು ಉಲ್ಲಂಘಿಸಿದ್ದು, ಮೇಲ್ನೋಟಕ್ಕೆ ಕಂಡು ಬಂದಿದೆ. ರಾಜ್ಯಮಟ್ಟದ ಬ್ಯಾಂಕರ್ಸ್ ಸಮಿತಿ (ಎಸ್‌ಎಲ್‌ಬಿಸಿ)ಸಭೆಯಲ್ಲಿ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಹಾಗೂ ಖಾಸಗಿ ಬ್ಯಾಂಕ್‌ಗಳ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದ್ದರೂ, ಸಂಬಂಧಿಸಿದ ಮೇಲಾಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೇ, ಇಷ್ಟೊಂದು ಪ್ರಮಾಣದಲ್ಲಿ ಹಣ ಸಾಗಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಡಿಸಿ ನಿತೇಶ ಪಾಟೀಲ ಹೇಳಿದ್ದಾರೆ. ಅಕ್ರಮವಾಗಿ ಹಣ ಸಾಗಣೆ ಮಾಡುವ ಪ್ರಕರಣಗಳಲ್ಲಿ ಯಾವುದೇ ಮುಲ್ಲಾಜಿಲ್ಲದೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಡಿಸಿ ಅವರು ತಾಕೀತು ಮಾಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮಾರ್ಕೇಟ್ ಎಸಿಪಿ ಸಿದ್ಧನಗೌಡ, ಮಾಳಮಾರುತಿ ಸಿಪಿಐ ಜಗದೀಶ ಹಂಚಿನಾಳ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಹೆಚ್.ದೇವರಡ್ಡಿ, ವೃಷಭ ಯಲಗೌಡ, ಬಸವರಾಜ ಕರೋಶಿ ಮತ್ತೀತರರು ಹಣದ ಸಮೇತ ಕಾರ್ ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಗಡಿ ಚೆಕ್‌ಪೋಸ್ಟ್‌ಗಳಲ್ಲಿಯೂ ಹದ್ದಿನಕಣ್ಣು !
ಮಾಳಮಾರುತಿ ಪೊಲೀಸ್‌ರು ೯ ಲಕ್ಷ ರೂ.ಹಣವನ್ನು ಜಪ್ತಿ ಮಾಡಿಕೊಳ್ಳುತ್ತಿದ್ದಂತೆಯೇ, ಜಿಲ್ಲೆಯ ಗೋವಾ ಮತ್ತು ಮಹಾರಾಷ್ಟ್ರದಿಂದ ಆಗಮಿಸುವ ಗಡಿಚೆಕ್‌ಪೋಸ್ಟ್‌ಗಳಲ್ಲಿಯೂ ಸಂಶಯಾಸ್ಪದ ವಾಹನಗಳ ಮೇಲೆ ಕಣ್ಣಿಟ್ಟು, ಅಕ್ರಮವಾಗಿ ಸಾಗಾಣೆ ಮಾಡುವ ಮದ್ಯ, ನಗದು ಅಥವಾ ಇನ್ನಿತರ ವಸ್ತುಗಳ ಮೇಲೆಯೂ ನಿಗಾ ಇರಿಸುವಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಎಸ್ಪಿ ಸಂಜೀವ ಪಾಟೀಲ ತಾಕೀತು ಮಾಡಿದ್ದಾರೆ.