ನ್ಯೂಸ್

ಬೆಕ್ಕರೆ ಶಾಲೆ ಖಾಸಗಿ ಸ್ಕೂಲ್‌ಗಳಿಗೆ ಸೆಡ್ಡು

ಬೆಟ್ಟದಪುರ: ಗ್ರಾಮಾಂತರ ಪ್ರದೇಶದ ಸರ್ಕಾರಿ ಶಾಲೆಯಲ್ಲಿ ದಾನಿಗಳ ನೆರವಿನಿಂದ ಸ್ಮಾರ್ಟ್‌ಕ್ಲಾಸ್ ಕೊಠಡಿ ನಿರ್ಮಾಣ ಮಾಡಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಅಭಿಪ್ರಾಯಪಟ್ಟರು.


ಬೆಟ್ಟದಪುರದ ಸಮೀಪದ ಬೆಕ್ಕರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಶ್ರೀ ಬಾಲಚಂದ್ರ ಬಸವೇಶ್ವರ ಸ್ವಾಮಿ ಶಾಲಾಭಿವೃದ್ಧಿ ಟ್ರಸ್ಟ್ ನೇತೃತ್ವದಲ್ಲಿ ದಾನಿಗಳ ನೆರವಿನಿಂದ ನಿರ್ಮಿಸಿರುವ ಸ್ಮಾರ್ಟ್ ಕ್ಲಾಸ್ ಕೊಠಡಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆ ಮಕ್ಕಳು ಶಿಕ್ಷಕರ ಮೇಲೆ ನಂಬಿಕೆ ಇಟ್ಟು ಶಾಲೆಯ ಹಿರಿಯ ವಿದ್ಯಾರ್ಥಿಗಳು ಟ್ರಸ್ಟ್ ಸ್ಥಾಪಿಸಿ ದಾನಿಗಳ ನೆರವಿನಿಂದ ಸ್ಮಾರ್ಟ್‌ಕ್ಲಾಸ್ ನಿರ್ಮಿಸಿರುವುದು ಶ್ಲಾಘನೀಯ ಕಾರ್ಯ ಎಂದು ಹೇಳಿದರು.


ಸ್ವಾತಂತ್ರ್ಯ ನಂತರ ಕಿರಿಯ ಪ್ರಾಥಮಿಕ ಶಾಲೆಯಿಂದ ಆರಂಭವಾದ ಬೆಕ್ಕರೆ ಗ್ರಾಮದ ಸರ್ಕಾರಿ ಶಾಲೆ ಉನ್ನತೀಕರಣಗೊಂಡು ಹಿರಿಯ ಪ್ರಾಥಮಿಕ ಶಾಲೆಯಾಗಿದೆ. ಸ್ಥಳೀಯರ ಕಾಳಜಿಯಿಂದ ಉತ್ತಮ ಪ್ರಯತ್ನದೊಂದಿಗೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಸಾಗುತ್ತಿರುವುದು ಪಿರಿಯಾಪಟ್ಟಣ ತಾಲೂಕಿಗೆ ಮಾದರಿಯಾಗಿದೆ ಎಂದರು.


ಶಾಲಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಬಿ.ಇ.ರವಿಕುಮಾರ್, ಗೌರವಾಧ್ಯಕ್ಷ ಬಸವೇಗೌಡ, ಕಾರ್ಯದರ್ಶಿ ಬಿ.ಎಚ್.ಪ್ರಕಾಶ್, ಖಜಾಂಚಿ ಸತೀಶ್ ಆರಾಧ್ಯ, ಸಂಚಾಲಕರಾದ ಸಣ್ಣಸ್ವಾಮಿ, ಮಂಜುನಾಥ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಪ್ರಶಾಂತ್, ಇಸಿಒ ಗಣೇಶ್, ಬಿಆರ್‌ಪಿ ಶಿವಶಂಕರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಮತಾ, ಸದಸ್ಯ ಬಿ.ಎಸ್.ಜಗದೀಶ್, ಮಾಜಿ ಸದಸ್ಯೆ ಮಾಲತಿ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಬಿ.ಬಿ.ರವಿ, ಶಿಕ್ಷಕರಾದ ವಿಶುಕುಮಾರ್, ಕೃಷ್ಣ, ಜಯಕುಮಾರ ಇದ್ದರು.