ಕೊಲೆ ಆರೋಪಿ ಕೋಬೋಸ್-ಮಾರ್ಟಿನೆಜ್  
ನ್ಯೂಸ್

ಪತ್ನಿ, ಮಗನ ಮುಂದೆಯೇ ಶಿರಚ್ಛೇದನ! ಅಮೆರಿಕದಲ್ಲಿ ಭಾರತೀಯ ವ್ಯಕ್ತಿ ಕ್ರೂರ ಹತ್ಯೆ: ಅಸಲಿಗೆ ನಡೆದಿದ್ದೇನು? | Brutally Murdered

Brutally Murdered: ಇದೇ ಸೆ.10 ರಂದು ಅಮೆರಿಕದ ಡಲ್ಲಾಸ್‌ನ ಮೋಟೆಲ್‌ನಲ್ಲಿ ನಡೆದ ಆಘಾತಕಾರಿ ದಾಳಿಯಲ್ಲಿ ಭಾರತೀಯ ಮೂಲದ ವ್ಯಕ್ತಿಯೊಬ್ಬ ಕ್ರೂರವಾಗಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಿಂಸಾತ್ಮಕ ವಿವಾದದಲ್ಲಿ 50 ವರ್ಷದ ಚಂದ್ರಮೌಳಿ ನಾಗಮಲ್ಲಯ್ಯ ಎಂಬುವವರನ್ನು ಅವರ ಪತ್ನಿ ಮತ್ತು ಮಗನ ಮುಂದೆಯೇ ಶಿರಚ್ಛೇದ ಮಾಡಲಾಗಿದೆ.ಟೆಕ್ಸಾಸ್‌ನ ಟೆನಿಸನ್ ಗಾಲ್ಫ್ ಕೋರ್ಸ್ ಬಳಿಯ ಇಂಟರ್‌ಸ್ಟೇಟ್​ನ ಡೌನ್‌ಟೌನ್ ಸೂಟ್ಸ್ ಮೋಟೆಲ್‌ನಲ್ಲಿ ಈ ದಾಳಿ ನಡೆದಿದೆ ಎಂದು ವರದಿ ಉಲ್ಲೇಖಿಸಿದೆ.

ಡಲ್ಲಾಸ್ ಪೊಲೀಸರು ಯೋರ್ಡಾನಿಸ್ ಕೊಬೋಸ್-ಮಾರ್ಟಿನೆಜ್ ಎಂಬುವವನು ಹತ್ಯೆಯ ಶಂಕಿತ ಎಂದು ಹೆಸರಿಸಿದ್ದಾರೆ. ಆತನನ್ನು ಬಂಧಿಸಿ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ. ಆರೋಪಿಯನ್ನು ಬಾಂಡ್ ಇಲ್ಲದೆ ಬಂಧಿಸಲಾಗಿದೆ ಮತ್ತು ವಲಸೆ ಬಂಧನಕ್ಕೂ ಒಳಪಟ್ಟಿವೆ ಎಂದು ಜೈಲು ದಾಖಲೆಗಳು ತೋರಿಸುತ್ತವೆ.

ಕೊಲೆಗೆ ಕಾರಣ ಏನು?

ನಾಗಮಲ್ಲಯ್ಯ ಮತ್ತು ಮಹಿಳಾ ಸಹೋದ್ಯೋಗಿಯೊಬ್ಬರು ಹೋಟೆಲ್ ಕೊಠಡಿಯನ್ನು ಸ್ವಚ್ಛಗೊಳಿಸುತ್ತಿದ್ದಾಗ ಆರೋಪಿ ಕೋಬೋಸ್-ಮಾರ್ಟಿನೆಜ್ ಕೊಠಡಿಯಲ್ಲಿ ತಂಗಿದ್ದನು. ಈಗಾಗಲೇ ಕೆಟ್ಟುಹೋಗಿರುವ ತೊಳೆಯುವ ಯಂತ್ರವನ್ನು ಬಳಸಬೇಡಿ ಎಂದು ಅವರು ಹೇಳಿದ್ದರು ಎಂದು ವರದಿಯಾಗಿದೆ.

ನಾಗಮಲ್ಲಯ್ಯ ಅವರು ನೇರವಾಗಿ ಮಾತನಾಡುವ ಬದಲು, ಭಾಷಾಂತರಕಾರರಾಗಿ ಕಾರ್ಯನಿರ್ವಹಿಸಿದ ಮಹಿಳಾ ಸಹೋದ್ಯೋಗಿಯ ಮೂಲಕ ತಮ್ಮ ಹೇಳಿಕೆಗಳನ್ನು ನೀಡಿದ್ದರಿಂದ ಕೋಬೋಸ್-ಮಾರ್ಟಿನೆಜ್ ಕೋಪಗೊಂಡು ಕೊಲೆ ಮಾಡಿದ್ದಾನೆ ಎಂದು ಅಫಿಡವಿಟ್‌ನಲ್ಲಿ ಹೇಳಲಾಗಿದೆ.

ವೀಡಿಯೊದಲ್ಲಿ ಕೋಬೋಸ್-ಮಾರ್ಟಿನೆಜ್ ಕೊಠಡಿಯಿಂದ ಹೊರಬಂದು, "ತನ್ನ ಮಚ್ಚಿನಿಂದ" ವ್ಯಕ್ತಿಯನ್ನು ಎಳೆದುಕೊಂಡು ಬರುತ್ತಿರುವ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿದೆ.(ಏಜೆನ್ಸೀಸ್​)