ನ್ಯೂಸ್

ಬೀಡಿ ಕಿಡಿಯಿಂದ ಧಗಧಗನೆ ಹೊತ್ತಿ ಉರಿದ ದ್ವಿಚಕ್ರವಾಹನ-ಅಂಗಡಿ; ವಿಡಿಯೋ ನೋಡಿ ಜನ ದಂಗು

ಹೈದರಾಬಾದ್​​: ಬೀಡಿ, ಸಿಗರೇಟ್​​​ ಬಳಕೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ತಿಳಿದಿದ್ದರು ಬಹಳಷ್ಟು ಜನರು ಅದರ ದಾಸರಾಗಿರುತ್ತಾರೆ. ಈ ಅಭ್ಯಾಸ ಇರುವವರು ಅಜಾಗರೂಕರಾಗಿದ್ದರೆ ಕ್ಷಣಾರ್ಧದಲ್ಲಿ ತೊಂದರೆ ಪ್ರಾಣ ತೆಗೆಯುವವರೆಗೂ ಬರುತ್ತದೆ ಎಂಬುದಕ್ಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಈ ವಿಡಿಯೋ ಸಾಕ್ಷಿಯಾಗಿದೆ.

ಪೆಟ್ರೋಲ್​​ ಬಂಕ್​​ನಿಂದ ವ್ಯಕ್ತಿಯೊಬ್ಬ ಕ್ಯಾನ್​ನಲ್ಲಿ ಪೆಟ್ರೋಲ್​ ಖರೀದಿಸಿ ತಂದಿದ್ದಾನೆ. ದಾರಿ ಮಧ್ಯೆ ಅಂಗಡಿಯೊಂದರ ಬಳಿ ಬೈಕ್​ ನಿಲ್ಲಿಸಿ ಪೆಟ್ರೋಲ್​ ಇದ್ದ ಡಬ್ಬವನ್ನು ಪಕ್ಕದಲ್ಲಿ ಇಟ್ಟಿದ್ದಾನೆ ಕ್ಯಾನ್​ ಒಡೆದು ಪೆಟ್ರೋಲ್​ ಎಲ್ಲ ಸುರಿದಿದೆ. ಇದನ್ನು ನೋಡದ ಮತ್ತೊಬ್ಬ ವ್ಯಕ್ತಿ ಬೀಡಿಯನ್ನು ಬೆಂಕಿಕಡ್ಡಿಯಿಂದ ಹೊತ್ತಿಸಿಕೊಂಡು ಕಿರಿಯನ್ನು ಕೆಳಗೆ ಬಿಟ್ಟಿದ್ದಾರೆ. ಆ ಬಳಿಕ ಬೆಂಕಿ ಧಗಧಗನೆ ಹೊತ್ತಿಕೊಂಡು ಅಲ್ಲಿದ್ದ ಬೈಕ್​ ಮತ್ತು ಅಂಗಡಿಗೆಲ್ಲಾ ಹಬ್ಬಿದೆ. ಅಲ್ಲೇ ನಿಂತಿದ್ದ ಇಬ್ಬರು ಹೆದರು ಓದಿ ಹೋಗಿದ್ದಾರೆ. ಈ ದೃಶ್ಯಗಳನ್ನು ವೈರಲ್​ ವಿಡಿಯೋದಲ್ಲಿ ಕಾಣಬಹುದಾಗಿದೆ.

ಈ ಘಟನೆ ಅನಂತಪುರ ಜಿಲ್ಲೆಯ ಕಲ್ಯಾಣದುರ್ಗ ಪಟ್ಟಣದಲ್ಲಿ ನಡೆದಿದೆ. ನೋಡನೋಡುತ್ತಿದ್ದಂತೆ ಬೆಂಕಿ ರಸ್ತೆಯಲ್ಲಿ ನಿಲ್ಲಿಸಿದ್ದ ಬೈಕ್​ಗಳು ಹಾಗೂ ಅಂಗಡಿಗಳಿಗೆ ಹಬ್ಬಿದೆ. ಎಚ್ಚೆತ್ತ ಅಂಗಡಿ ಮಾಲೀಕರು ಹಾಗೂ ಸ್ಥಳೀಯರು ಬೆಂಕಿಯನ್ನು ಕ್ರಮೇಣ ಹತೋಟಿಗೆ ತೆಗೆದುಕೊಂಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)