ಮದ್ದೂರು ತಾಲೂಕಿನ ಬೆಸಗರಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಮದ್ದೂರು ತಾಲೂಕು ಸಮಿತಿ ವತಿಯಿಂದ ಕಟ್ಟಡ ಕಾರ್ಮಿಕ ಸಂಘದ ಕಚೇರಿ ಉದ್ಘಾಟನೆ ಹಾಗೂ ಕಾರ್ಮಿಕ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಪಾಪಚಾರಿ, ಪುಟ್ಟಸ್ವಾಮಚಾರ್, ಸಿ.ರಾಜು, ಬಾಲರಾಜು, ಕೃಷ್ಣಪ್ಪ ಇದ್ದರು. 
ನ್ಯೂಸ್

ಸವಲತ್ತು ಪಡೆದು ಆರ್ಥಿಕವಾಗಿ ಸದೃಢರಾಗಿ

ಮದ್ದೂರು: ತಾಲೂಕಿನ ಬೆಸಗರಹಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಮದ್ದೂರು ತಾಲೂಕು ಸಮಿತಿ ವತಿಯಿಂದ ಕಟ್ಟಡ ಕಾರ್ಮಿಕ ಸಂಘದ ಕಚೇರಿ ಉದ್ಘಾಟನೆ ಹಾಗೂ ಕಾರ್ಮಿಕ ದಿನಾಚರಣೆಯನ್ನು ಗುರುವಾರ ಹಮ್ಮಿಕೊಳ್ಳಲಾಗಿತ್ತು

ತಾಲೂಕು ಅಧ್ಯಕ್ಷ ಪಣ್ಣೆದೊಡ್ಡಿ ಪಾಪಚಾರಿ ಮಾತನಾಡಿ, ಕಾರ್ಮಿಕರು ಸರ್ಕಾರ ಸಲವತ್ತುಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಮತ್ತು ನಮ್ಮ ಹಕ್ಕುಗಳನ್ನು ಪಡೆದಕೊಳ್ಳಲು ಸಂಘಟಿತರಾಗಿ ಹೋರಾಟ ಮಾಡಲು ಸಮಿತಿಯನ್ನು ಬಲಿಷ್ಟಗೊಳಿಸಬೇಕು ಎಂದರು. ಜಿಲ್ಲಾಧ್ಯಕ್ಷ ಶ್ರೀನಿವಾಸ್, ಮಾಜಿ ಜಿಲ್ಲಾಧ್ಯಕ್ಷ ಪುಟ್ಟಸ್ವಾಮಚಾರ್, ಜಿಲ್ಲಾ ಖಜಾಂಚಿ ಸಿ.ರಾಜು, ಉಪಾಧ್ಯಕ್ಷ ಬಾಲರಾಜು, ತಾಲೂಕು ಕಾರ್ಯದರ್ಶಿ ಕೃಷ್ಣಪ್ಪ, ವಿಶ್ವಕರ್ಮ ಸಮುದಾಯ ಶ್ರೀ ಕಾಳಿಕಾಂಬಾ ಟ್ರಸ್ಟ್ ಅಧ್ಯಕ್ಷ ಹರೀಶ್, ಮುಖಂಡರಾದ ದೊರೆ, ಶಿಲ್ಪಾ, ಶಿವಕುಮಾರ್ ಇದ್ದರು.