ನ್ಯೂಸ್

ಬೆಚಮೆಲ್​ ಸಾಸ್ ರೆಸಿಪಿ ​: ಕೇವಲ 30 ನಿಮಿಷಗಳಲ್ಲಿ ಮಾಡಿ ಸವಿಯಿರಿ..| Recipe

Recipe: ಇತ್ತೀಚಿನ ದಿನಗಳಲ್ಲಿ ವಿವಿಧ ದೇಶದ ಖಾದ್ಯಗಳು ನಮ್ಮ ಹತ್ತಿರ ಇರುವಂತಹ ಆಹಾರ ಮಳಿಗೆಗಳಲ್ಲಿ ಸಿಗುತ್ತವೆ. ಕೆಲವೊಮ್ಮೆ ಆಹಾರ ಪ್ರಿಯರು ಅಂತಹ ಆಹಾರ ಪದಾರ್ಥಗಳಿಗೆ ಮಾರಿ ಹೋಗಿ ಅವುಗಳನ್ನು ತಿನ್ನಲು ಬಯಸುತ್ತಿರುತ್ತಾರೆ. ಅಂತವರಿಗಾಗಿ ನಾವಿಂದು ಫ್ರೆಂಚ್​ ಸ್ಟೈಲ್​ನ ಬೆಚಮಿನ್​ ಸಾಸ್​ ಮಾಡುವುದನ್ನು ತಿಳಿಸಿಕೊಡಲಿದ್ದೇವೆ. ಆಹಾರ ಪ್ರಿಯರು ನಿಮ್ಮ ಬಿಡುವಿನ ಸಮಯದಲ್ಲಿ ಆರೋಗ್ಯಕರವಾದ ಈ ಖಾದ್ಯವನ್ನು ತಯಾರಿಸಿ ಸೇವಿಸಿ..

ಬೇಕಾಗುವ ಪದಾರ್ಥಗಳು

* 50 ಗ್ರಾಂ ಬೆಣ್ಣೆ

* 50 ಗ್ರಾಂ ಬಿಳಿ ಗೋಧಿ ಹಿಟ್ಟು

* 1 ಲೀಟರ್​ ಹಾಲು

* 1 ಸಣ್ಣ ಈರುಳ್ಳಿ

* ರುಚಿಗೆ ತಕ್ಕಷ್ಟು ಉಪ್ಪು

* ಮೆಣಸು

* ಪಾತ್ರೆ

* ತಂತಿ ಕೂರ್ಚ / ಪುರಕೆ

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಬೆಣ್ಣೆಯನ್ನುಕರಗಿಸಿಕೊಳ್ಳಿ. ನಂತರ ಅದಕ್ಕೆ ಗೋದಿ ಹಿಟ್ಟು ಹಾಕಿ ಮಿಶ್ರಣವನ್ನು ಕಲಸಿರಿ. 2-3 ನಿಮಿಷಗಳ ಕಾಲ ಕಂದು ಬಣ್ಣ ಬರುವವರೆಗೆ ಬೇಯಿಸಿ ಇಟ್ಟುಕೊಳ್ಳಿ. ಮತ್ತೊಂದು ಪಾತ್ರೆಯಲ್ಲಿ ಹಾಲನ್ನು ಹಾಕಿ ಬಿಸಿಮಾಡಿ, ನಂತರ ಈರುಳ್ಳಿ ಸಿಪ್ಪೆಯನ್ನು ತೆಗೆದು ಹಾಲಿನೊಂದಿಗೆ ಅದೇ ಪಾತ್ರೆಗೆ ಸೇರಿಸಿ. ಹಾಲು ಶೇ.80 ರಷ್ಟು ಬಿಸಿಯಾಗುವವರೆಗೂ ಬಿಸಿ ಮಾಡಿ, ಹಾಲು ಪಾತ್ರೆಯ ಕೆಳಗೆ ಅಂಟಿಕೊಳ್ಳದ ರೀತಿಯಲ್ಲಿ ನೋಡಿಕೊಳ್ಳಿ. ಮೊದಲು ಬೇಯಿಸಿದ ಮಿಶ್ರಣಕ್ಕೆ ಬಿಸಿ ಮಾಡಿದ ಹಾಲನ್ನು ಕ್ರಮೇಣ ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಮೆಣಸು ಹಾಕಿ ಸುಮಾರು 15 ನಿಮಿಷಗಳ ಕಾಲ ದಪ್ಪವಾಗುವವರೆಗೆ ಬೇಯಿಸಿ ಸ್ವಲ್ಪ ಬೆಚ್ಚಗಾದ ನಂತರ ಚೀಸ್​ ಸಾಸ್​ ರೂಪದಲ್ಲಿ ಬೆಚಮಿನ್​ ಸಾಸ್​ ಸವಿಯಿರಿ. (ಏಜೆನ್ಸೀಸ್​)