ಕೋಲಾರ ನಗರದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ೧೪ನೇ ಘಟಿಕೋತ್ಸವದಲ್ಲಿ ಸಂಸ್ಥೆಯ ಕುಲಾಧಿಪತಿ ಜಿ.ಎಚ್.ನಾಗರಾಜ್ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.  
ನ್ಯೂಸ್

ವೃತ್ತಿಯಲ್ಲಿ ಬಡವರತ್ತ ಇರಲಿ ಕಾಳಜಿ

ಕಿರುವಾರ ಎಸ್.ಸುದರ್ಶನ್

ಕೋಲಾರ: ವೃತ್ತಿ ಯಾವುದೇ ಇರಲಿ ಬಡವರ ಬಗ್ಗೆ ಕಾಳಜಿ ಇರಲಿ. ಭ್ರಷ್ಟಾಚಾರ ಬೇಡ, ಮಾನವೀಯತೆ ಇರಲಿ. ಶ್ರೀಮಂತರಿAದ ಪಡೆದ ಹಣವನ್ನು ಬಡವರಿಗೆ ಸಹಾಯ ಮಾಡಿ ಎಂದು ಯಳಂದೂರು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರ ಹಾಗೂ ಕರುಣಾ ಟ್ರಸ್ಟ್ ಅಧ್ಯಕ್ಷ ಡಾ.ಎಚ್.ಸುದರ್ಶನ್ ಸಲಹೆ ನೀಡಿದರು.

ನಗರ ಹೊರವಲಯದ ಟಮಕದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ದೇವರಾಜ ಅರಸು ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ 14ನೇ ಘಟಿಕೋತ್ಸವದಲ್ಲಿ ಮಾತನಾಡಿ, ಖಾಸಗಿ ಸಂಸ್ಥೆಗಳು ಇರುವುದು ಹಣ ಮಾಡಲು ಎಂಬ ಮಾತಿದೆ. ಅಲ್ಲೂ ಹೃದಯವಂತರು ಇದ್ದಾರೆ. ಸರ್ಕಾರದಲ್ಲಿ ಇರುವವರೆಲ್ಲ ಭ್ರಷ್ಟರಲ್ಲ. ಅಹಂಕಾರ ಬಿಟ್ಟರೆ ಖಂಡಿತ ಕೆಲಸದಲ್ಲಿ ಒತ್ತಡ ಕಡಿಮೆಯಾಗುತ್ತದೆ ಎಂದರು.
ವೈದ್ಯಕೀಯ ವೃತ್ತಿಗೆ ವಿಶೇಷ ಗೌರವವಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ವಾಣಿಜ್ಯೀಕರಣಗೊಂಡಿದೆ, ಅನೈತಿಕಗೊಂಡಿದೆ. ಗೌರವಾನ್ವಿತ ವೃತ್ತಿ ಯಾವತ್ತೂ ರಾಜಿ ಆಗಬಾರದು. ಪಡೆದ ಜ್ಞಾನವನ್ನು ಸಮಾಜಕ್ಕೆ ವಾಪಸ್ ಕೊಡಬೇಕು. ಸರ್ಕಾರಗಳು ಆರೋಗ್ಯ ಕ್ಷೇತ್ರಕ್ಕೆ ಬಹಳ ಕಡಿಮೆ ಖರ್ಚು ಮಾಡುತ್ತಿವೆ. ಮಹತ್ವದ ಕ್ಷೇತ್ರ ಇದಾಗಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲಿಡಬೇಕು ಎಂದು ತಿಳಿಸಿದರು.
ಕೇರಳದಲ್ಲಿ ಶೇ.7 ಅನುದಾನ ಮೀಸಲಿಡುತ್ತಾರೆ. ಆದರೆ ಕರ್ನಾಟಕದಲ್ಲಿ ಈ ಹಿಂದೆ ಆರೋಗ್ಯಕ್ಕೆ ಕ್ಷೇತ್ರಕ್ಕೆ ಶೇ.5 ಹಣ ಮೀಸಲಿಡಲಾಗುತಿತ್ತು. ಈ ಬಾರಿ ಕೇವಲ ಶೇ.3.4 ಅನುದಾನ ಇಟ್ಟಿದ್ದಾರೆ ಎಂದು ಬೇಸರಿಸಿದರು.
ವೈದ್ಯಕೀಯ ವೃತ್ತಿ ನನಗೆ ಲೈಫ್ ಮಿಷನ್ ಇದ್ದಂತೆ. ತಂದೆ ಹೃದಯಾಘಾತದಿಂದ ನಿಧನರಾದರು. ಅಂದು ನಾನು ಅಸಹಾಯಕನಾಗಿದ್ದೆ. ಆದರೆ, ಅಳಲಿಲ್ಲ. ಬದಲಾಗಿ ವೈದ್ಯನಾಗಬೇಕೆಂದು ಅಂದೇ ನಿರ್ಧರಿಸಿದೆ. ಆ ಆಸೆ ಈಡೇರಿತು. ಪಾಲಕರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಬಾಲ್ಯವನ್ನು ನೆನಪಿಸಿಕೊಂಡರು.
ವೈದ್ಯಕೀಯ ಕೋರ್ಸ್ ಓದಿದವರು ಯುಪಿಎಸ್‌ಸಿ ಪರೀಕ್ಷೆ ಬರೆದು ಅಧಿಕಾರಿಗಳಾಗುತ್ತಿದ್ದಾರೆ. ಐಎಎಸ್ ಅಧಿಕಾರಿಯಾಗಿ ಆರೋಗ್ಯ ಇಲಾಖೆಯ ಅಭಿವೃದ್ಧಿ ಮಾಡಲು ಸಾಧ್ಯ. ಆದರೆ, ಕೆಲವರು ಕಮರ್ಷಿಯಲ್ ಟ್ಯಾಕ್ಸ್ ಅಽಕಾರಿಗಳಾಗುತ್ತಿದ್ದಾರೆ. ಅವರ ಉದ್ದೇಶವೇ ಬೇರೆ. ವೈದ್ಯಕೀಯ ಓದಿಗೂ ಮಾಡುವ ಕೆಲಸಕ್ಕೂ ಸಂಬAಧವೇ ಇಲ್ಲದಂತಾಗಿದೆ. ಈ ರೀತಿ ಆಗಬಾರದು ಎಂದು ಅಭಿಪ್ರಾಯಪಟ್ಟರು.

  • ಚಿನ್ನದ ಪದಕ ಪ್ರದಾನ
    ಸಂಸ್ಥೆಯ ಒಟ್ಟು 321 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಪದವಿಪೂರ್ವ ಹಾಗೂ ಅಲೈಡ್ ಹೆಲ್ತ್ ಆ್ಯಂಡ್ ಬೇಸಿಕ್ ಸೈನ್ಸಸ್ ಕೋರ್ಸ್ಗಳಲ್ಲಿ ಸಂಸ್ಥಾಪಕ ಅಧ್ಯಕ್ಷರ ಹೆಸರಲ್ಲಿ 14 ಚಿನ್ನದ ಪದಕ ನೀಡಲಾಯಿತು. ಶ್ರೀ ದೇವರಾಜ ಅರಸು ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯ ಕುಲಾಽಪತಿ ಜಿ.ಎಚ್.ನಾಗರಾಜ್ ಅಧ್ಯಕ್ಷತೆ ವಹಿಸಿ ಪದವಿ ಪ್ರದಾನ ಮಾಡಿದರು. ಸಂಸ್ಥೆಯ ಕುಲಪತಿ ಡಾ.ಬಿ.ವೆಂಗಮ್ಮ ವಾರ್ಷಿಕ ವರದಿ ವಾಚಿಸಿದರು. ಕುಲಸಚಿವ ಡಾ.ಡಿ.ವಿ.ಎಲ್.ಎನ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರೀಕ್ಷಾ ನಿಯಂತ್ರಣಧಿಕಾರಿ ಡಾ.ಸಿ.ಮುನಿನಾರಾಯಣ ಚಿನ್ನದ ಪದಕ ಪಡೆದ ವಿದ್ಯಾರ್ಥಿಗಳನ್ನು ಪರಿಚಯಿಸಿದರು.

ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಟ್ರಸ್ಟಿಗಳಾದ ಡಾ.ಎಂ.ವಿಜಯಕುಮಾರ್, ರಾಜೇಶ್ ಜಗದಾಳೆ, ಸಲಹೆಗಾರ ಎಸ್.ಚಂದ್ರಶೇಖರ್ ಶೆಟ್ಟಿ, ಡೀನ್‌ಗಳಾದ ಡಾ.ಪ್ರಭಾಕರ್, ಡಾ.ದಯಾನಂದ್, ವೈದ್ಯಕೀಯ ಅಽÃಕ್ಷಕ ಡಾ.ಜೆ.ಕೃಷ್ಕಣಪ್ಪ, ವಿಜಯಲಕ್ಷ್ಮಿ ಭಟ್ ಇದ್ದರು.